March 12, 2026
Thursday, March 12, 2026
spot_img

SHOCKING | ನಾನು ಸತ್ರೆ ಒಂಟಿಯಾಗ್ತಾಳೆ ಎಂದು ಪತ್ನಿಯನ್ನು ಮರ್ಡರ್‌ ಮಾಡಿದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ಪತ್ನಿಯನ್ನು ಕೊಲೆ ಮಾಡಿದ್ದಾರೆ. ಹೌದು, ಬೆಂಗಳೂರಿನ ಆವಲಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.

ನಾಗೇಶ್ವರ್‌ ರಾವ್‌ ತಮ್ಮ ಪತ್ನಿ ಸಂಧ್ಯಾರನ್ನು ಕೊಂದಿದ್ದಾರೆ. ಮೂರು ವರ್ಷದಿಂದ ಅಪಾರ್ಟ್‌ಮೆಂಟ್‌ನಲ್ಲಿದ್ದ ನಾಗೇಶ್ವರ್‌ ರಾವ್‌ಗೆ ಅನಾರೋಗ್ಯ ಕಾಡುತ್ತಿತ್ತು.

ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ನಾಗೇಶ್ವರ್‌ ಆಲೋಚಿಸಿದ್ದರು. ಆದರೆ ಈ ರೀತಿ ಮಾಡಿಕೊಂಡರೆ ಪತ್ನಿ ಸಂಧ್ಯಾ ಕಥೆ ಏನಾಗುತ್ತದೆ? ಆಕೆ ಒಂಟಿಯಾಗುತ್ತಾಳೆ ಎಂದು ಆಕೆಯನ್ನೂ ಸಾಯಿಸಿ ತಾನೂ ಸಾಯಲು ನಿರ್ಧರಿಸಿದ್ದರು.

ಪತ್ನಿಯ ಕುತ್ತಿಗೆಗೆ ಟವಲ್‌ ಸುತ್ತಿ ಕೊಲೆ ಮಾಡಿದ್ದಾರೆ. ನಂತರ ತಾನೂ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಧೈರ್ಯ ಬಾರದೇ ಕೂಗಿಕೊಂಡು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಪಕ್ಕದ ಮನೆಯವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಂಧ್ಯಾ ಮೃತದೇಹವನ್ನು ಈಸ್ಟ್‌ ಪಾಯಿಂಟ್‌ ಕಾಲೇಜಿಗೆ ಕಳುಹಿಸಲಾಗಿದೆ. ಪೊಲೀಸರು ನಾಗೇಶ್ವರ್‌ರಾವ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !