ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರ್ಭಿಣಿ ಪತ್ನಿಗೆ ಇದ್ದಕ್ಕಿದ್ದಂತೆಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪತಿ ಕಾರ್‌ನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಆಸ್ಪತ್ರೆ ಕಡೆ ಹೊರಟಿದ್ದಾರೆ. ಆದರೆ ಡ್ರಿಂಕ್ಸ್ ಮಾಡಿ ಗಾಡಿ ಓಡಿಸಿದ್ದಕ್ಕಾಗಿ ಪೊಲೀಸರು ಕಾರ್ ನಿಲ್ಲಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಮೇಲೆ ಏನಾಯ್ತು?
ಡ್ರಿಂಕ್& ಡ್ರೈವ್ ಮಾಡುತ್ತಿದ್ದ ಪತಿ ಪ್ಲೀಸ್ ಸರ್ ನಮ್ಮನ್ನು ಹೋಗಲು ಬಿಡಿ, ಪತ್ನಿಯ ಪರಿಸ್ಥಿತಿ ನೋಡಿ ಎಂದು ಅಂಗಲಾಚಿದ್ದಾರೆ. ಪೊಲೀಸ್ ಮಾತ್ರ ಗರಂ ಆದಂತೆಯೇ ಕಾಣಿಸಿದ್ದು, ಅಡ್ಡಗಟ್ಟಿ ಯಾಕೆ ಕುಡಿದು ಗಾಡಿ ಓಡಿಸುತ್ತಿದ್ದೀರಿ? ಹೆಂಡತಿ ಬಗ್ಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಥಿಯೇಟರ್ ಬಾತ್‌ರೂಮ್‌ನಲ್ಲೂ ಕ್ಯಾಮರಾ ಕೆಟ್ಟ ಕಣ್ಣು! ಕೇಸ್ ದಾಖಲು
ಈಗ ಮಾತಾಡೋಕೆ ಸಮಯ ಇಲ್ಲ ಸರ್, ಇದೊಂದು ಬಾರಿ ಬಿಟ್ಟು ಬಿಡಿ ಎಂದು ಮಹಿಳೆಯೂ ಬೇಡಿದ್ದಾರೆ. ಆಗ ಪೊಲೀಸ್ ಪತಿಯನ್ನು ಕೆಳಕ್ಕೆ ಇಳಿಯಿರಿ ಎಂದು ಅವಾಝ್ ಹಾಕಿದ್ದಾರೆ. ಭಯದಲ್ಲಿ ವ್ಯಕ್ತಿ ಕೆಳಕ್ಕೆ ಇಳಿಸಿದ್ದಾರೆ. ಹಿಂಬದಿ ಸೀಟ್‌ನಲ್ಲಿ ಕೂರಿ ಎಂದು ಪೊಲೀಸ್ ಆದೇಶಿಸಿದ್ದಾರೆ. ಸರ್ ಬಿಟ್ಟುಬಿಡಿ ಎಂದು ರಿಕ್ವೆಸ್ಟ್ ಮಾಡುತ್ತಲೇ ವ್ಯಕ್ತಿ ಹಿಂಬದಿ ಸೀಟ್‌ನಲ್ಲಿ ಕೂತಿದ್ದಾರೆ. ನಂತರ ಪೊಲೀಸ್ ತಮ್ಮ ಡ್ಯೂಟಿ ಜಾಗ ಬಿಟ್ಟು ಕಾರ್‌ನ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತಿದ್ದಾರೆ.
ಮೇಡಂ ನೀವು ನಮ್ಮ ದೇಶದ ಹೆಣ್ಣುಮಗು, ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿ ಸೀಟ್‌ಬೆಲ್ಟ್ ಹಾಕಿ ಗಾಡಿ ಓಡಿಸಿಕೊಂಡು ಹೋಗಿ ಆಸ್ಪತ್ರೆಗೆ ಬಿಟ್ಟು ಬಂದಿದ್ದಾರೆ. ಪೊಲೀಸರ ಜವಾಬ್ದಾರಿಯುವ ನಿಲುವಿನಿಂದಾಗಿ ನೆಟ್ಟಿಗರು ಸೆಲ್ಯೂಟ್ ಎನ್ನುತ್ತಿದ್ದಾರೆ.

