Thursday, January 8, 2026

ನೈರ್ಮಲ್ಯಕ್ಕೆ ಮೊದಲ ಆದ್ಯತೆ: ಕೋಗಿಲು ಲೇಔಟ್ ನೆಲಸಮದ ಹಿಂದೆ ತರೂರ್ ನೀಡಿದ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆ ಪ್ರದೇಶದ ದುಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಅದೊಂದು ವಾಸಯೋಗ್ಯ ಬಡಾವಣೆಯಂತೆ ಇರಲಿಲ್ಲ, ಬದಲಿಗೆ ಕಸದ ತೊಟ್ಟಿಯಂತಿತ್ತು” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ: CINE | ಕನ್ನಡಕ್ಕೆ ಒಬ್ಬೊಬ್ಬರಾಗಿಯೇ ಬರ್ತಿದ್ದಾರೆ ಬಾಲಿವುಡ್‌ ಹೀರೋಯಿನ್ಸ್‌, ಟಾಕ್ಸಿಕ್‌ಗೆ ತಾರಾ ಸುತಾರಿಯಾ ಎಂಟ್ರಿ

ನಗರದ ಮೂಲಸೌಕರ್ಯ ಮತ್ತು ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಇಂತಹ ಕಠಿಣ ಕ್ರಮಗಳು ಅನಿವಾರ್ಯ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ತೆರವು ಕಾರ್ಯಾಚರಣೆಯ ಪರ-ವಿರೋಧದ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

error: Content is protected !!