ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಕದನದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪೋಪ್ ಲಿಯೋ XIV ನಡುವೆ ಮಾತಿನ ಸಮರ ಶುರುವಾಗಿದ್ದು, ಇರಾನ್ ಯುದ್ಧದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಮನವಿ ಮಾಡಿದ್ದರು. ಇದಕ್ಕೆ ಟ್ರಂಪ್ ಸಿಟ್ಟಾಗಿ ಪೋಪ್ ರಾಜಕಾರಣಿಯಲ್ಲ ಎಂದು ಗುಡುಗಿದ್ದು, ಈ ಬೆನ್ನಲ್ಲೇ ಟ್ರಂಪ್ ಹೇಳಿಕೆಗೆ ಮತ್ತೆ ಪ್ರತಿಕ್ರಿಯಿಸಿರುವ ಪೋಪ್ ಲಿಯೋ, ವ್ಯಾಟಿಕನ್ನ ಮನವಿಗಳು ಸುವಾರ್ತೆಗಳಿಂದ ಕೂಡಿರುತ್ತದೆ. ನಾನು ಟ್ರಂಪ್ ಆಡಳಿತಕ್ಕೆ ಹೆದರುವುದಿಲ್ಲ ಎಂದು ಉತ್ತರಿಸಿದ್ದಾರೆ.
ನಾನು ಉದ್ದೇಶ ಯಾರ ಮೇಲೂ ದಾಳಿ ಮಾಡುವಂತೆ ಹೊಂದಿಲ್ಲ. ಜೊತೆಗೆ ಯಾವ ಚರ್ಚೆಯೂ ನನಗೆ ಇಷ್ಟವಿಲ್ಲ. ಕೇವಲ ಶಾಂತಿಯನ್ನು ಬಯಸುತ್ತೇನೆ. ಹೀಗಾಗಿ ನಾನು ಇರಾನ್ ಸೇರಿದಂತೆ ವಿಶ್ವದ ಯಾವುದೇ ಸಂಘರ್ಷಗಳಿಗೆ ಕಾರಣವಾದ ಅಂಶವು ಕೊನೆಯಾಗಲಿಂದು ಬಯಸುವೆ ಎಂದು ಪೋಪ್ ತಿಳಿಸಿದರು.
ಒಳ್ಳೆಯ ಸುದ್ದಿಯನ್ನು ತಿಳಿಸುವುದರಿಂದ ಶಾಂತಿ ಮತ್ತು ಸಾಮರಸ್ಯ ಸ್ಥಾಪನೆಯಾಗಲಿದ್ದು, ಇದರಿಂದ ಯುದ್ಧ ಕೊನೆಗೊಂಡರೆ ಅಂತಹ ಮಾತುಗಳನ್ನು ಹೇಳಲು ನಾನು ಹಿಂಜರಿಯುವುದಿಲ್ಲ ಎಂದರು.
ಇದಕ್ಕೂ ಮೊದಲು ಡೊನಾಲ್ಡ್ ಟ್ರಂಪ್ ಲಿಯೋ ಪೋಪ್ ಅವರ ವಿರುದ್ಧ ಕಿಡಿಕಾರಿದ್ದು, ನಾನು ಪೋಪ್ ಲಿಯೋ ಅವರ ಅಭಿಮಾನಿಯಲ್ಲ. ಅವರು ಪೋಪ್ ಆಗಿ ತನ್ನ ಕೆಲಸವನ್ನು ಮಾಡಿದರೆ ಸಾಕು ಎಂದು ಹೇಳಿದ್ದರು.



