Monday, January 12, 2026
Monday, January 12, 2026
spot_img

ಮಕ್ಕಳು ಪಡೆಯಲು ಬಯಸಲ್ಲ, ಈಗ ಗರ್ಭಿಣಿಯಾಗಲು ಆಸಕ್ತಿ ಇಲ್ಲ: ನಟಿ ಪಾರ್ವತಿ ಅಚ್ಚರಿ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟಿ ಪಾರ್ವತಿ ತಿರುವೋತ್ ಮಗು, ಗರ್ಭಧಾರಣೆ ಕುರಿತಿ ಅಚ್ಚರಿ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.

ನಟಿ ಪಾರ್ವತಿ ತಿರುವೋತ್ ಮಗುವನ್ನು ದತ್ತು ಪಡೆಯುವ ತಮ್ಮ ಆಸೆಯನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ತಾಯಿಯಾಗಲು ತುಂಬಾ ಆಸೆ ಇತ್ತು, ಮಗುವಿಗೆ ಹೆಸರನ್ನು ಕೂಡ ಆಗಲೇ ಯೋಚಿಸಿದ್ದೆ, ಆದರೆ ಈಗ ಗರ್ಭಿಣಿಯಾಗಲು ಆಸಕ್ತಿ ಇಲ್ಲ ಎಂದು ಪಾರ್ವತಿ ಹೇಳಿದ್ದಾರೆ.

ಸಂದರ್ಶನದಲ್ಲಿ ಪಾರ್ವತಿ ಈ ಬಗ್ಗೆ ಮಾತನಾಡಿದ್ದಾರೆ. ತಾನು ತಾಯಿಯಾಗಲೆಂದೇ ಹುಟ್ಟಿದ್ದೇನೆ ಎಂದು ಒಮ್ಮೆ ಅನಿಸಿತ್ತು, ಆದರೆ ಅದೃಷ್ಟವಶಾತ್ ಆ ಆಲೋಚನೆಯಿಂದ ಹೊರಬರಲು ಸಾಧ್ಯವಾಯಿತು ಎಂದು ಪಾರ್ವತಿ ಹೇಳಿದರು.

‘ನನ್ನ ಮಗುವಿಗಾಗಿ ನಾನು ಇಟ್ಟ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಏಳು ವರ್ಷದವಳಿದ್ದಾಗಲೇ ದತ್ತು ಪಡೆಯಬೇಕೆಂದು ನಾನು ನಿರ್ಧರಿಸಿದ್ದೆ. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೇ ನನಗೆ ರೋಲ್ ಮಾಡೆಲ್ ಎಂದಿದ್ದಾರೆ. ಅವರ ಸಂದರ್ಶನ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಅಪ್ಪ-ಅಮ್ಮ ಆಗ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಟ್ಯಾಟೂ ಎಲ್ಲ ನೋಡಿದ ಮೇಲೆ ನನ್ನ ನಿರ್ಧಾರ ಗಂಭೀರವಾಗಿದೆ ಎಂದು ಅವರಿಗೆ ಅರ್ಥವಾಗಿದೆ ಎಂದು ಪಾರ್ವತಿ ತಿರುವೋತ್ ಹೇಳುತ್ತಾರೆ.

ಒಂದು ವೇಳೆ ನಾನು ತಾಯಿಯಾಗಲು ಸಿದ್ಧಳಾಗಬಹುದು. ಆದರೆ ಸದ್ಯಕ್ಕೆ ಮಗುವಿಗೆ ಜನ್ಮ ನೀಡುವ ವ್ಯಕ್ತಿಯಾಗಿ ನಾನು ನನ್ನನ್ನು ನೋಡುವುದಿಲ್ಲ. ನಾನು ಅಂಡಾಣು ಫ್ರೀಜ್ ಮಾಡಿಲ್ಲ. ನನ್ನ ದೇಹವನ್ನು ಆ ಪ್ರಕ್ರಿಯೆಗೆ ಒಳಪಡಿಸಲು ನಾನು ಬಯಸುವುದಿಲ್ಲ. ಎಲ್ಲರಿಗೂ ಅವರದೇ ಆದ ನಿರ್ಧಾರಗಳಿವೆ. ನನ್ನ ನಿರ್ಧಾರಗಳು ಹಲವು ಬಾರಿ ಬದಲಾಗಿವೆ. ಒಂದು ಹಂತದಲ್ಲಿ ನಾನು ತಾಯಿಯಾಗಬೇಕೆಂದು ಮಾತ್ರ ಬಯಸಿದ್ದೆ ಎಂದಿದ್ದಾರೆ.

ತಾಯಿಯಾಗಬೇಕು ಅನ್ನೋ ಆಲೋಚನೆಯಿಂದ ಹೊರಬರಲು ಸಾಧ್ಯವಾದದ್ದಕ್ಕೆ ದೇವರಿಗೆ ಧನ್ಯವಾದ. ಈ ರೀತೀಯ ಆಲೋಚನೆಯ ಒಂದು ಸಣ್ಣ ಅಂಶವೂ ಈಗ ನನ್ನಲ್ಲಿಲ್ಲ. ಆದರೆ ಮಗುವನ್ನು ನೋಡಿಕೊಳ್ಳುವ, ಪ್ರೀತಿಸುವ ಮನಸ್ಸಿದೆ. ಅದು ನನಗೆ ನನ್ನ ನಾಯಿಯಿಂದ ಸಿಕ್ಕಿದೆ ಎಂದು ಪಾರ್ವತಿ ಹೇಳಿದ್ದಾರೆ.

ಭವಿಷ್ಯದಲ್ಲಿ ಮಗು ಬೇಕು ಎನಿಸಿದರೆ, ಅದು ನನ್ನ ಸಂಗಾತಿಯ ಅಂಶವೂ ಇರಬೇಕು ಎನಿಸಿದಾಗ ಮಾತ್ರ. ಇಂದಿನ ಪರಿಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡುವುದೆಂದರೆ ಅವರನ್ನು ಬೆಂಕಿಗೆ ತಳ್ಳಿದಂತೆ. ಅದಕ್ಕಾಗಿ ಹೆಚ್ಚು ಮಕ್ಕಳನ್ನು ಪಡೆಯಲು ನಾನು ಬಯಸುವುದಿಲ್ಲ ಎಂದು ಪಾರ್ವತಿ ಹೇಳಿದ್ದಾರೆ.

Most Read

error: Content is protected !!