ಅಮ್ಮನನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದೀನಿ: ಯೆಮೆನ್​​ನಲ್ಲಿ ತಾಯಿಗಾಗಿ ಕಣ್ಣೀರಿಟ್ಟ ನಿಮಿಷಾ ಪ್ರಿಯಾ ಮಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಯಮೆನ್‌ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆಗಾಗಿ 13 ವರ್ಷದ ಮಗಳು ಮಿಷೆಲ್ ಸೇರಿದಂತೆ ಕುಟುಂಬಸ್ಥರು ಯಮೆನ್‌ಗೆ ತೆರಳಿದ್ದಾರೆ.

ತಂದೆ ಟಾಮಿ ಥಾಮಸ್ ಮತ್ತು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥಾಪಕ ಡಾ. ಕೆ. ಎ. ಪೌಲ್ ಅವರೊಂದಿಗೆ ಮಿಷೆಲ್ ಯೆಮನ್ ಅಧಿಕಾರಿಗಳನ್ನು ಭೇಟಿಯಾಗಿ ತಾಯಿಯ ಬಿಡುಗಡೆಗೆ ಮನವಿ ಮಾಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಯೆಮನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಅವರನ್ನು ಮಗಳು ಮಿಷೆಲ್ ನೋಡಿಲ್ಲ. ತಾಯಿಯನ್ನು ನೆನಪು ಮಾಡಿಕೊಂಡುರ ಭಾವುಕರಾಗಿ ಮಾತನಾಡಿದ ಮಿಷೆಲ್, ‘ನನಗೆ ಅಮ್ಮ ತುಂಬಾ ಇಷ್ಟ. ದಯವಿಟ್ಟು ಅಮ್ಮನನ್ನು ಮನೆಗೆ ಕರೆದುಕೊಂಡು ಬರಲು ಸಹಾಯ ಮಾಡಿ. ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಕಣ್ಣೀರು ಹಾಕಿದ್ದಾರೆ.

ಮಗಳು ಮಿಷೆಲ್ ಜೊತೆಯಲ್ಲಿ ನಿಮಿಷಾ ಅವರ ಪತಿ ಟಾಮಿ ಥಾಮಸ್ ಕೂಡ ಮನವಿ ಮಾಡಿದ್ದಾರೆ. ದಯವಿಟ್ಟು ನನ್ನ ಪತ್ನಿ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಿ, ಅವರನ್ನು ಸ್ವದೇಶಕ್ಕೆ ಕರೆತರಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನಿಮಿಷಾ ಪ್ರಿಯಾ ಅವರ ಒಬ್ಬಳೇ ಮಗಳು ಹತ್ತು ವರ್ಷಗಳಿಂದ ಅವರನ್ನು ನೋಡಿಲ್ಲ. ಮಿಷೆಲ್ ಇಲ್ಲಿದ್ದಾಳೆ. ತಲಾಲ್ ಕುಟುಂಬಕ್ಕೆ ಧನ್ಯವಾದಗಳು. ನೀವು ನಿಮಿಷಾ ಅವರನ್ನು ಶೀಘ್ರದಲ್ಲೇ, ಬಹುಶಃ ನಾಳೆ ಅಥವಾ ನಾಡಿದ್ದು ಬಿಡುಗಡೆ ಮಾಡಿದರೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಪಿಟಿಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಡಾ.ಕೆ.ಎ. ಪೌಲ್ ಹೇಳಿದ್ದಾರೆ.

ಇದೊಂದು ಸಂಪೂರ್ಣವಾಗಿ ಮಾನವೀಯ ಆಧಾರದಲ್ಲಿ ನಡೆಯುತ್ತಿದೆ . ದುರದೃಷ್ಟವಶಾತ್, ನಾವು ಯುದ್ಧಗಳು ಮತ್ತು ಅನಗತ್ಯ ಸಂಘರ್ಷಗಳಿಂದ ನಾಶವಾಗುತ್ತಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಈ ಸಂಧಾನ ಯಶಸ್ವಿಯಾಗುತ್ತದೆ ಮತ್ತು ಜಗತ್ತಿನ ಹಲವು ಭಾಗಗಳಿಗೆ ಇದು ಮಾದರಿಯಾಗುತ್ತದೆ ಎಂದು ನಾವು ಆಶಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಕೇರಳ ಮೌಲ್ವಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದರು. ಭಾರತ ಸರ್ಕಾರದ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಜುಲೈ 16 ರಂದು ನಿಗದಿಯಾಗಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಭಾರತ ಸರ್ಕಾರ ನಂತರ ತಿಳಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!