March 23, 2026
Monday, March 23, 2026
spot_img

ಒಮ್ಮೆಯಾದರು ಜೈಲಿನಲ್ಲಿರಬೇಕೆಂಬ ಆಸೆ…ಅದಕ್ಕೇನು ಮಾಡಿದ ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅವೆ ಆಕಾಂಕ್ಷೆಗಳು ಮನುಷ್ಯನಿಗೆ ಇರುವುದು ಸಹಜ್. ಕೆಲವೊಮ್ಮೆ ಅದು ಅತಿಯಾದ ಅಪಾಯ ನಿಶ್ಚಿತ. ಇದೀಗ ಅಂತಹ ಆಸೆಗೆ ಓರ್ವ ಜೈಲು ಪಾಲಾಗಿದ್ದಾನೆ.

ಹೌದು, ಕೊಲ್ಲಂನ ಮಯ್ಯನಾಡ್‌ ನಿವಾಸಿಗೆ ಜೈಲಿನಲ್ಲಿರಬೇಕೆಂಬ ಆಸೆಯಿಂದ ಆತ ಕುಡಿದ ಅಮಲಿನಲ್ಲಿ ಕೊಲ್ಲಂ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಪೊಲೀಸರುಮಯ್ಯನಾಡ್‌ನಲ್ಲಿರುವ ಮುಕ್ಕಂ ನಿವಾಸಿ ಪ್ರಮೋದ್‌ (44) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್‌ ನಿಯಂತ್ರಣ ಕೊಠಡಿಯ 112 ಸಂಖ್ಯೆಗೆ ಬಂದ ಕರೆಯಲ್ಲಿ, ‘ನಾನು ಕೊಲ್ಲಂ ಕಲೆಕ್ಟರೇಟ್‌ನಲ್ಲಿ ಬಾಂಬ್‌ ಇಟ್ಟಿದ್ದೇನೆ. ನೀವು ನನ್ನನ್ನು ಪತ್ತೆಹಚ್ಚಿ ಹಿಡಿಯಲು ಸಾಧ್ಯವಾಗದಿದ್ದರೆ, ಬಾಂಬ್‌ 50 ನಿಮಿಷಗಳಲ್ಲಿ ಸ್ಫೋಟಗೊಳ್ಳುತ್ತದೆ’ ಎಂದು ಹೇಳಿದ್ದ.ಈ ಮಾಹಿತಿ ಬಂದ ತಕ್ಷಣ ಪೊಲೀಸರು, ಬಾಂಬ್‌ ಸ್ಕ್ವಾಡ್ ಮತ್ತು ಶ್ವಾನ ದಳ ಸ್ಥಳಕ್ಕೆ ಧಾವಿಸಿ, ಪೂರ್ತಿ ತಪಾಸಣೆ ನಡೆಸಿದರು. ಆದರೆ ಏನೂ ಪತ್ತೆಯಾಗಲಿಲ್ಲ.

ಬಳಿಕ ಪೊಲೀಸರಿಗೆ ಇದು ಫೇಕ್ ಕಾಲ್ ಎಂದು ತಿಳಿದುಬಂದಿದ್ದು. ಫೋನ್‌ ಸಂಖ್ಯೆ ಆಧಾರದಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಾಗ ಕರೆ ಮಾಡಿದ್ದಾಗಿ ಒಪ್ಪಿಕೊಂಡನು. ನಂತರ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ‘ಮನೆಯಲ್ಲಿಯಾವುದೇ ಸೌಲಭ್ಯಗಳಿಲ್ಲ ಮತ್ತು ಜೈಲಿಗೆ ಹೋಗಲು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾನೆ. ನಂತರ ಆರೋಪಿಗೆ ಜಾಮೀನು ನೀಡಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !