March 22, 2026
Sunday, March 22, 2026
spot_img

ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ: ಮತ್ತೆ ಡೊನಾಲ್ಡ್ ಟ್ರಂಪ್ ಹಳೇ ರಾಗ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಕಳೆದ ವರ್ಷ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಲು ನಾನೇ ಮಧ್ಯಸ್ಥಿಕೆ ವಹಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ನಾನು ಎರಡೂ ದೇಶಗಳು ಯುದ್ಧ ನಿಲ್ಲಿಸದಿದ್ದರೆ ಶೇ. 200ರಷ್ಟು ಸುಂಕ ವಿಧಿಸುತ್ತೇನೆ ಎಂದು ಬೆದರಿಕೆ ಹಾಕಿದ್ದೆ. ಹಾಗಾಗಿ ಎರಡೂ ದೇಶಗಳ ನಡುವಿನ ಸಂಘರ್ಷ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಹೇಳಿದ್ದಾರೆ.

ಇತ್ತ ಟ್ರಂಪ್ ಈ ಹೇಳಿಕೆ ನೀಡುವ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಲ್ಲೇ ಇದ್ದರು.

ಪ್ರಧಾನಿ ನರೇಂದ್ರ ಮೋದಿಯವರನ್ನು “ಒಬ್ಬ ಮಹಾನ್ ವ್ಯಕ್ತಿ” . ನಾನು ಯುದ್ಧವನ್ನು ನಿಲ್ಲಿಸಲು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದ್ದೆ. ಯುದ್ಧಗಳು ಉಲ್ಬಣಗೊಳ್ಳುತ್ತಿದ್ದ ಸಮಯದಲ್ಲಿ ಎರಡೂ ದೇಶಗಳ ನಾಯಕರೊಂದಿಗೆ ನೇರವಾಗಿ ಮಾತನಾಡಿದ್ದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ. ಆದ್ರೆ ಭಾರತ ಈಗಾಗಲೇ ಅನೇಕ ಬಾರಿ ನಿರಾಕರಿಸಿದೆ.

ನಾನು ಅವರಿಬ್ಬರೊಂದಿಗೂ ಫೋನ್ ಮಾತುಕತೆ ನಡೆಸಿದ್ದೆ. ನನಗೆ ಪ್ರಧಾನಿ ಮೋದಿ ಚೆನ್ನಾಗಿ ತಿಳಿದಿದ್ದರು. ಅವರು ಆತ್ಮೀಯವಾಗಿದ್ದರಿಂದ ಈ ಬಗ್ಗೆ ಮಾತನಾಡಿ ಮನವೊಲಿಸಿದ್ದೆ ಎಂದು ಟ್ರಂಪ್ ಹೇಳಿದ್ದಾರೆ.

ಇತ್ತ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಈ ಕದನವಿರಾಮದಲ್ಲಿ ಟ್ರಂಪ್ ಅವರ ಪಾತ್ರವನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ಅವರ ಹಸ್ತಕ್ಷೇಪವನ್ನು ಸಮಯೋಚಿತ ಮತ್ತು ಪರಿಣಾಮಕಾರಿ ಎಂದು ಕರೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !