ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಲೋಕದ ಬಹುನಿರೀಕ್ಷಿತ 2026ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಭಾರಿ ಸಂಚಲನ ಸೃಷ್ಟಿಯಾಗಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತಕ್ಕೆ ತಂಡವನ್ನು ಕಳುಹಿಸಲು ನಿರಾಕರಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಿಗ್ ಶಾಕ್ ನೀಡಿದೆ. ಬಾಂಗ್ಲಾದೇಶವನ್ನು ಟೂರ್ನಿಯಿಂದಲೇ ಹೊರಹಾಕಲಾಗಿದ್ದು, ಆ ಸ್ಥಾನಕ್ಕೆ ಸ್ಕಾಟ್ಲೆಂಡ್ ತಂಡವನ್ನು ಸೇರ್ಪಡೆಗೊಳಿಸಲಾಗಿದೆ.
ಫೆಬ್ರವರಿ 2026ರಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ, ಭದ್ರತೆಯ ದೃಷ್ಟಿಯಿಂದ ಭಾರತದಲ್ಲಿ ಆಡಲು ಬಾಂಗ್ಲಾದೇಶ ಹಿಂದೇಟು ಹಾಕಿತ್ತು. ತನ್ನ ಪಂದ್ಯಗಳನ್ನು ಭಾರತದ ಹೊರಗೆ ನಡೆಸಿಕೊಡುವಂತೆ ಐಸಿಸಿಗೆ ಮನವಿ ಮಾಡಿತ್ತು. ಆದರೆ, “ಟೂರ್ನಿಯ ನಿಯಮಗಳು ಎಲ್ಲರಿಗೂ ಒಂದೇ, ಗೊತ್ತುಪಡಿಸಿದ ಸ್ಥಳಗಳಲ್ಲೇ ಪಂದ್ಯಗಳು ನಡೆಯಬೇಕು” ಎಂದು ಕಡಕ್ ಆಗಿ ತಿಳಿಸಿರುವ ಐಸಿಸಿ, ಬಾಂಗ್ಲಾದೇಶದ ಮನವಿಯನ್ನು ತಿರಸ್ಕರಿಸಿ ತಂಡವನ್ನು ಟೂರ್ನಿಯಿಂದ ಕೈಬಿಟ್ಟಿದೆ.
ಬಾಂಗ್ಲಾದೇಶದ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ಶ್ರೇಯಾಂಕದ ಆಧಾರದ ಮೇಲೆ ಸ್ಕಾಟ್ಲೆಂಡ್ ತಂಡ ಅಧಿಕೃತವಾಗಿ ಪ್ರವೇಶ ಪಡೆದಿದೆ. ಸ್ಕಾಟ್ಲೆಂಡ್ ಈಗ ಗ್ರೂಪ್ ಸಿ ನಲ್ಲಿ ಸ್ಥಾನ ಪಡೆದಿದ್ದು, ಅಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡಗಳನ್ನು ಎದುರಿಸಲಿದೆ.
ಸ್ಕಾಟ್ಲೆಂಡ್ ತಂಡದ ಪಂದ್ಯಗಳ ವಿವರ:
ಫೆಬ್ರವರಿ 7: ವೆಸ್ಟ್ ಇಂಡೀಸ್ ವಿರುದ್ಧ (ಮೊದಲ ಪಂದ್ಯ)
ಫೆಬ್ರವರಿ 9: ಇಟಲಿ ವಿರುದ್ಧ
ಫೆಬ್ರವರಿ 14: ಇಂಗ್ಲೆಂಡ್ ವಿರುದ್ಧ
ಕೊನೆಯ ಪಂದ್ಯ: ನೇಪಾಳ ವಿರುದ್ಧ



