ಹೊರಗೆ ಮೈ ಕೊರೆಯುವ ಚಳಿ ಇರಲಿ ಅಥವಾ ಮಳೆ ಸುರಿಯುತ್ತಿರಲಿ, ಐಸ್‌ಕ್ರೀಂ ಪ್ರಿಯರಿಗೆ ಸೀಸನ್ ಮುಖ್ಯವಲ್ಲ. ಚಳಿಗಾಲದಲ್ಲೂ ಐಸ್‌ಕ್ರೀಂ ಪಾರ್ಲರ್‌ಗಳ ಮುಂದೆ ಜನರ ಕ್ಯೂ ಸಾಮಾನ್ಯವಾಗಿದೆ. ಆದರೆ, ಮನೆಯಲ್ಲಿ ಹಿರಿಯರು “ಚಳಿಯಲ್ಲಿ ಐಸ್‌ಕ್ರೀಂ ತಿಂದರೆ ನೆಗಡಿ, ಕೆಮ್ಮು ಗ್ಯಾರಂಟಿ!” ಎಂದು ಎಚ್ಚರಿಸುತ್ತಾರೆ. ಹಾಗಾದರೆ ಈ ಮಾತಿನಲ್ಲಿ ಎಷ್ಟು ಸತ್ಯವಿದೆ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ವೈದ್ಯಕೀಯ ತಜ್ಞರ ಪ್ರಕಾರ, ಕೇವಲ ತಣ್ಣನೆಯ ಆಹಾರ ಸೇವನೆಯಿಂದ ನೇರವಾಗಿ ಶೀತ ಅಥವಾ ಕೆಮ್ಮು ಬರುವುದಿಲ್ಲ. ಶೀತ ಮತ್ತು ಜ್ವರ ಬರಲು ಮುಖ್ಯ ಕಾರಣ ವೈರಸ್ ಅಥವಾ ಬ್ಯಾಕ್ಟೀರಿಯಾಗಳು. ತಣ್ಣನೆಯ ಐಸ್‌ಕ್ರೀಂ ನಮ್ಮ ಹೊಟ್ಟೆಗೆ ಹೋದಾಗ, ನಮ್ಮ ದೇಹದ ಆಂತರಿಕ ವ್ಯವಸ್ಥೆಯು ಅದನ್ನು ತಕ್ಷಣವೇ ದೇಹದ ಉಷ್ಣತೆಗೆ ತಕ್ಕಂತೆ ಬಿಸಿ ಮಾಡಲು ಪ್ರಯತ್ನಿಸುತ್ತದೆ. ಆದ್ದರಿಂದ ದೇಹದ ತಾಪಮಾನ ಹಠಾತ್ತನೆ ಕುಸಿಯುವುದಿಲ್ಲ.
ಆರೋಗ್ಯವಂತರಿಗೆ ಐಸ್‌ಕ್ರೀಂನಿಂದ ತೊಂದರೆಯಿಲ್ಲದಿದ್ದರೂ, ಈ ಕೆಳಗಿನ ಸಮಸ್ಯೆ ಇರುವವರು ಜಾಗರೂಕರಾಗಿರಬೇಕು:
ಗಂಟಲು ಸೋಂಕು: ಈಗಾಗಲೇ ಗಂಟಲು ನೋವು ಅಥವಾ ಇನ್‌ಫೆಕ್ಷನ್ ಇದ್ದರೆ, ತಣ್ಣನೆಯ ಐಸ್‌ಕ್ರೀಂ ಆ ಅಸ್ವಸ್ಥತೆಯನ್ನು ಹೆಚ್ಚಿಸಬಹುದು.
ಶ್ವಾಸಕೋಶದ ಸಮಸ್ಯೆ: ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರಿಗೆ ಸಕ್ಕರೆಯಂಶವಿರುವ ಶೀತಲ ಆಹಾರಗಳು ಕಫ ಉತ್ಪಾದನೆಯನ್ನು ಹೆಚ್ಚಿಸಿ ಸಮಸ್ಯೆ ತಂದೊಡ್ಡಬಹುದು.
ವೈರಲ್ ಸೋಂಕು: ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆ ಇರುತ್ತದೆ. ಐಸ್‌ಕ್ರೀಂ ಸೇವನೆಯಿಂದ ಗಂಟಲಿನ ಒಳಭಾಗ ಒಣಗಿ ಸೋಂಕುಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇರುತ್ತದೆ.

