ಮನೆಗೆ ಕಳ್ಳ ಬಂದರೆ ಏನು ಮಾಡ್ಬೋದು ಅನ್ನೋ ಬಗ್ಗೆ ಯಾರೂ ಯೋಚನೆ ಮಾಡಿ ಅಥವಾ ಪ್ಲಾನ್ ಮಾಡಿಕೊಂಡು ಇರೋದಿಲ್ಲ. ಆ ಸಂದರ್ಭಕ್ಕೆ ಏನು ಸೂಕ್ತ ಎನಿಸುತ್ತದೆಯೋ ಅದನ್ನು ಮಾಡುತ್ತಾರೆ. ಆದರೆ ಒತ್ತಡದಲ್ಲಿ ತಪ್ಪು ಮಾಡುವುದು ಸಹಜ, ಹೆಚ್ಚು ಮಾಹಿತಿ ನಮ್ಮಲ್ಲಿದ್ರೆ ತಪ್ಪುಗಳು ಆಗೋದಿಲ್ಲ. ಏನು ಮಾಡಬಹುದು?
ನಿಮ್ಮ ಮನೆಯ ಬಗ್ಗೆ ಕಳ್ಳರಿಗಿಂತ ಹೆಚ್ಚಾಗಿ ನಿಮಗೇ ಗೊತ್ತಿರೋಕೆ ಸಾಧ್ಯ. ಮುಖ್ಯದ್ವಾರ ಬಿಟ್ಟು ಇನ್ಯಾವ ಎಕ್ಸಿಟ್ ಇದ್ದರೂ ಹೊರಗೆ ಬಂದು ಪೊಲೀಸರಿಗೆ ಫೋನ್ ಮಾಡಿ.
ಎಮರ್ಜೆನ್ಸಿ ಸಂಖ್ಯೆಗಳನ್ನು ತಿಳಿದುಕೊಳ್ಳಿ. ಇದು ಸರಿಯಾದ ಸಮಯಕ್ಕೆ ಸಹಾಯಕ್ಕೆ ಬರುತ್ತದೆ. ಫೋನ್ ಸೈಲೆಂಟ್‌ಗೆ ಹಾಕಿ ಪೊಲೀಸರಿಗೆ ಫೋನ್ ಮಾಡಿ. ಸ್ನೇಹಿತರು ಅಥವಾ ಮನೆಯ ಪಕ್ಕದವರಿಗೆ ಮೆಸೇಜ್ ಮಾಡಿ ಪೊಲೀಸ್ ಕರೆಸಲು ಹೇಳಿ.
ಕಳ್ಳರನ್ನು ಹಿಡಿಯೋದು ಮುಖ್ಯ. ಆದರೆ ನಿಮ್ಮ ಜೀವ ಅದಕ್ಕಿಂತ ಅಮೂಲ್ಯ. ಕಳ್ಳರನ್ನು ಎದುರಿಸಲು ಹೋಗಬೇಡಿ. ಕಳ್ಳತನ ಅವರ ನಿತ್ಯದ ಕಸುಬು. ಅವರು ಎಲ್ಲದಕ್ಕೂ ತಯಾರಿಗಿಯೇ ಬಂದಿರುತ್ತಾರೆ.
ಮನೆಯಿಂದ ಹೊರಗೆ ಬರೋಕೆ ಆಗಲಿಲ್ಲ ಎಂದರೆ ಒಂದು ಮೂಲೆ ಹಿಡಿದುಕೊಂಡು ಕೂತುಕೊಳ್ಳಿ. ಕೈಲಾದರೆ ಫೋನ್ ಮಾಡಿ.
ಕಳ್ಳರು ಬಂದು ಹೋದ ನಂತರ ಯಾವುದೇ ವಸ್ತಗಳನ್ನು ಮುಟ್ಟಬೇಡಿ, ಮತ್ತೆ ಪೊಲೀಸರಿಗೆ ಕರೆ ಮಾಡಿ ತಿಳಿಸಿ. ಡ್ಯಾಮೇಜ್ ಆಗಿರುವ ಪದಾರ್ಥಗಳ ಫೋಟೊ ತೆಗೆದುಕೊಂಡು ಇಡಿ



