ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ ಬಿಜೆಪಿಯವರು ಸ್ವತಂತ್ರವಾಗಿ ಸರ್ಕಾರ ರಚಿಸಿರುವ ಊದಾಹರಣೆ ಇಲ್ಲ. ಸರ್ಕಾರ ರಚನೆಗೆ ಬೇಕಾಗಿರುವಷ್ಠು ಸಂಖ್ಯಾಬಲವನ್ನು ಮತದಾರರು ಯಾವತ್ತೂ ಬಿಜೆಪಿ ಗೆಲ್ಲಿಸಿಲ್ಲ. ಬಿಜೆಪಿಯವರು ಮತ ಕಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಮತಕಳ್ಳತನ ನಿಲ್ಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮತದಾರರ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಮತ ಕಳ್ಳತನ ನಿಲ್ಲಬೇಕು, ಮತದಾರರಿಗೆ ಮತಗಳ ಮೌಲ್ಯ ಗೊತ್ತಾಗಬೇಕು, ಪ್ರಜಾಪ್ರಭುತ್ವ ಉಳಿಯಲು ಅಕ್ರಮ ಮತದಾನ ನಿಲ್ಲಬೇಕು. ನಿಜವಾದ ಮತದಾರನಿಗೆ ನ್ಯಾಯ ಸಿಗಬೇಕು. ಕುತಂತ್ರದಿಂದ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಕ್ಕಪಾಠ ಕಲಿಸಬೇಕು. ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಆಗಲೇ ಪ್ರಜಾಪ್ರಭುತ್ವಕ್ಕೆ ನಿಜವಾದ ನ್ಯಾಯ ಸಿಗಲಿದೆ ಎಂದು ಹೇಳಿದರು.
2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುಧೋಳ ಮತಕ್ಷೇತ್ರದಲ್ಲಿ ಕನಿಷ್ಠ 16 ಸಾವಿರ ಖೊಟ್ಟಿ ಮತದಾರರು ಇರುವುದನ್ನು ಗುರುತಿಸಲಾಯಿತು. ಅದರಲ್ಲಿ ಶೇ.50ರಷ್ಟು ಮತದಾರರನ್ನು ಮತಪಟ್ಟಿಯಲ್ಲಿ ರದ್ದುಪಡಿಸುವಲ್ಲಿ ಯಶಸ್ವಿಯಾಗಿದೆವು ಎಂದು ಸಚಿವ ತಿಮ್ಮಾಪೂರ ಹೇಳಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ನಕಲಿ ಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ತಕ್ಕಪಾಠ ಕಲಿಸಬೇಕಾದರೆ ನಕಲಿ ಅಥವಾ ಅಕ್ರಮ ಮತದಾನ ನಿಲ್ಲಬೇಕು.

