ಹೊಸದಿಗಂತ ವರದಿ,ತುಮಕೂರು:
ಅವರು(ಡಿಕೆಶಿ) ಮಾಡಿದರೆ ಸರಿ ಬೇರೆಯವರು ಮಾಡಿದರೆ ತಪ್ಪಾಗುತ್ತೇ, ಸೂಕ್ತ ಸಮಯ ಬಂದಾಗ ಸೂಕ್ತ ಉತ್ತರ ನೀಡಲಾಗುವುದು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಗುಡುಗಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು ಆರ್.ಎಸ್.ಎಸ್.ಗೀತೆ ಬೇಕಾದರೂ ಹಾಡಬಹುದು, ಅಮಿತ್ ಶಾ ಜೊತೆ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತುಕೊಳ್ಳಬಹುದು. ಪ್ರಯಾಗ್ ರಾಜ್ ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿದರೆ ಹೊಟ್ಟೆ ತುಂಬುತ್ತಾ ಎಂದವರು ಅಲ್ಲಿಯೂ ಹೋಗುತ್ತಾರೆ. ಅಂಬಾನಿ ಮನೆಯ ಮದುವೆಯ ಆಮಂತ್ರಣ ಪತ್ರವನ್ನು ರಾಹುಲ್ ಗಾಂಧಿಯವರೆ ಸ್ವೀಕಾರ ಮಾಡಲಿಲ್ಲ. ಆದರೆ ನಮ್ಮ ಕೆ.ಪಿ.ಸಿ.ಸಿ. ಅಧ್ಯಕ್ಷರು ಕುಟುಂಬ ಸಮೇತ ಮದುವೆಗೆ ಹೋಗುತ್ತಾರೆ ಏನು ಮಾಡೋದು, ಇದರ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ.
ನಾವು ಯಾವ ಎಂ.ಎಲ್.ಎ, ಮಂತ್ರಿಗಳ ಸಭೆ ಕರೆಯಬಾರದು ಆದರೆ ಬೇರೆಯವರು ಎಲ್ಲರನ್ನು ಕರೆದು ಎಲ್ಲವನ್ನು ಮಾಡಬಹುದು. ಇರಲಿ ಸೂಕ್ತ ಸಮಯ ಬಂದಾಗ ಸೂಕ್ತ ಉತ್ತರ ನೀಡಲಾಗುವುದು ಎಂದು ಟಾಂಗ್ ನೀಡಿದ್ದಾರೆ.