January 30, 2026
Friday, January 30, 2026
spot_img

ಪುರುಷರ ಸ್ವಭಾವ ಹೀಗಿದ್ರೆ ಯಾವಾಗ ಹುಡುಗಿನೂ ತಿರುಗಿ ಕೂಡ ನೋಡಲ್ವಂತೆ!

ಒಂದು ಸಂಬಂಧ ನಿಂತಿರೋದು ದೊಡ್ಡ ಮಾತುಗಳ ಮೇಲೆ ಅಲ್ಲ. ದಿನನಿತ್ಯದ ಸಣ್ಣ ನಡೆ-ನುಡಿಗಳ ಮೇಲೆ. ನಾವು ಯಾರನ್ನು ಎಷ್ಟು ಪ್ರೀತಿಸುತ್ತೇವೋ ಅದಕ್ಕಿಂತ, ಅವರಿಗೆ ಎಷ್ಟು ಗೌರವ ಕೊಡ್ತೀವಿ ಅನ್ನೋದು ಸಂಬಂಧದ ದಿಕ್ಕನ್ನು ನಿರ್ಧರಿಸುತ್ತದೆ.

ಗೌರವ ಅನ್ನೋದು ವಯಸ್ಸಿಗೆ, ಸ್ಥಾನಕ್ಕೆ ಸೀಮಿತವಲ್ಲ. ಚಿಕ್ಕವರಾಗಲಿ ದೊಡ್ಡವರಾಗಲಿ, ಅವರನ್ನು ಗೌರವದಿಂದ ನೋಡಿದಾಗ ಮಾತ್ರ ನಮ್ಮ ಸ್ಥಾನವೂ ಅವರ ಮನಸ್ಸಿನಲ್ಲಿ ಉಳಿಯುತ್ತದೆ.

ಗಂಡ–ಹೆಂಡತಿ ಸಂಬಂಧದಲ್ಲಿ ಗೌರವ ಇನ್ನಷ್ಟು ಮುಖ್ಯ. “ನಾನು ಹೆಚ್ಚು, ನೀನು ಕಡಿಮೆ” ಅನ್ನೋ ಭಾವನೆ ಬಂದ ಕ್ಷಣದಿಂದಲೇ ಸಂಬಂಧದಲ್ಲಿ ಬಿರುಕು ಶುರುವಾಗುತ್ತದೆ.

ಪ್ರೀತಿಯ ಹೆಸರಿನಲ್ಲಿ ಹಿಡಿತ ಸಾಧಿಸುವ ಸ್ವಭಾವ, ಸುಳ್ಳು ಹೇಳುವ ಅಭ್ಯಾಸ, ಅನಗತ್ಯ ಅನುಮಾನ ಇವೆಲ್ಲಾ ನಿಧಾನವಾಗಿ ಗೌರವವನ್ನು ಕಡಿಮೆ ಮಾಡುತ್ತೆ. ಒಮ್ಮೆ ಗೌರವ ಹೋದ್ರೆ, ಪ್ರೀತಿ ಉಳಿದ್ರೂ ಅದರ ತೂಕ ಕಡಿಮೆಯಾಗುತ್ತದೆ.

ಇದನ್ನೂ ಓದಿ:

ಹೆಣ್ಣು ತನ್ನ ಭಾವನೆಗೆ ಬೆಲೆ ಸಿಗುತ್ತಿದೆಯಾ ಅನ್ನೋದನ್ನ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಅವಳ ಮಾತುಗಳನ್ನು ನಿರ್ಲಕ್ಷಿಸುವುದು, ಸಮಸ್ಯೆ ಎದುರಾದಾಗ ಜೊತೆ ನಿಲ್ಲದೇ ಇರುವುದೂ ಅವಳ ಮನಸ್ಸಿನಲ್ಲಿ ದೂರವನ್ನು ಸೃಷ್ಟಿಸುತ್ತದೆ.

ಅದೇ ರೀತಿ, ಅವಳ ಬೆಳವಣಿಗೆಯನ್ನು ಸಹಿಸದೇ, ಟೀಕೆ ಮಾಡುವ ಸ್ವಭಾವವೂ ಸಂಬಂಧವನ್ನು ಹಾಳುಮಾಡುತ್ತದೆ.

ವಾಸ್ತವವಾಗಿ, ಯಾವುದೇ ಸಂಬಂಧ ದೀರ್ಘಕಾಲ ಉಳಿಯಬೇಕಾದ್ರೆ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವ ಅಗತ್ಯ. ಪ್ರೀತಿ ಸಮಯದ ಜೊತೆ ಬದಲಾಗಬಹುದು. ಆದರೆ ಗೌರವ ಉಳಿದ್ರೆ, ಸಂಬಂಧಕ್ಕೂ ಆಧಾರ ಇರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !