ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಜಟಾಪಟಿ ನಡೆಯುತ್ತಿದೆ.
ಇನ್ನು ಸಿಎಂ ಬಲಾವಣೆ ವಿಚಾರವಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು ,ಸಿದ್ದರಾಮಯ್ಯ ಅವರನ್ನು ತೆಗೆದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತದೆ. ಹೋರಾಟ ಆಗುತ್ತದೆ. ಅವರಿಗೋಸ್ಕರ ಸಾವಿರಾರು ಜನ ಜೈಲಿಗೆ ಹೋಗಲು ಸಿದ್ದರಿದ್ದಾರೆ. ಸಿಎಂ ಸ್ಥಾನದಿಂದ ತೆಗೆಯುವುದು ಅಷ್ಟು ಸುಲಭವಲ್ಲ ಸಿದ್ದರಾಮಯ್ಯ ಅವರನ್ನು ಏಕೆ ತೆಗೆಯಬೇಕು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ತೆಗೆದ್ರೆ ಮತ್ತೆ ಆ ಸ್ಥಾನಕ್ಕೆ ಅವರಂತಹ ಒಬ್ಬ ವ್ಯಕ್ತಿ ಕಾಂಗ್ರೆಸ್ ನಲ್ಲೂ ಇಲ್ಲ, ಬಿಜೆಪಿಯಲ್ಲೂ ಇಲ್ಲ ಮತ್ತು ಜೆಡಿಎಸ್ ನಲ್ಲೂ ಇಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ತೆಗೆಯುವುದು ಅಷ್ಟು ಸುಲಭವಲ್ಲ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ತೆಗೆಯುವುದಾದರೆ ಅವರು ಮಾಡಿರುವ ಅಪರಾಧವಾದರೂ ಏನು ಎಂದು ಪ್ರಶ್ನಿಸಿದರು.

