ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯಲ್ಲಿ ಬೆಳಗಿನ ಜಾವ ನಡೆದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಅಜಾಗರೂಕತೆಯಿಂದ ಸಿಲುಕಿಕೊಂಡಿದ್ದ ಇಬ್ಬರು ಯುವಕರು, ಬ್ಲಿಂಕಿಟ್ ಡೆಲಿವರಿ ಏಜೆಂಟ್ ನೆರವಿನಿಂದ ಸುರಕ್ಷಿತವಾಗಿ ಹೊರಬಂದ ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 3 ಗಂಟೆ ವೇಳೆಗೆ ಬ್ಲಿಂಕಿಟ್‌ಗೆ ಒಂದು ಆರ್ಡರ್ ಬಂದಿತ್ತು. ಆ ಆರ್ಡರ್ ತಲುಪಿಸಲು ಬಂದ ಡೆಲಿವರಿ ಏಜೆಂಟ್‌ಗೆ ಅಲ್ಲಿ ಅನಿರೀಕ್ಷಿತ ಘಟನೆಯೊಂದು ಕಂಡಿದೆ. ಮನೆಯ ಒಳಭಾಗಕ್ಕೆ ಹೋಗುವ ದಾರಿ ಬಂದ್ ಆಗಿದ್ದರಿಂದ, ಇಬ್ಬರು ಸ್ನೇಹಿತರು ಬಾಲ್ಕನಿಯಲ್ಲೇ ಸಿಲುಕಿಕೊಂಡಿದ್ದರು. ಒಳಗೆ ಪೋಷಕರು ಮಲಗಿದ್ದ ಕಾರಣ, ಅವರನ್ನು ಎಬ್ಬಿಸದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಯುವಕರು ಯೋಚಿಸಿದ್ದರು.
ಇದನ್ನೂ ಓದಿ: Snacks | Bread Pizza: ಮನೆಯಲ್ಲೇ ಪಿಜ್ಜಾ ರುಚಿಯ ಮ್ಯಾಜಿಕ್! ನೀವೂ ಟ್ರೈ ಮಾಡಿ
ಗಾಬರಿಗೊಳ್ಳುವ ಬದಲು, ಬ್ಲಿಂಕಿಟ್ ಮೂಲಕ ಏನಾದರೂ ಆರ್ಡರ್ ಮಾಡುವುದೇ ಉತ್ತಮ ಪರಿಹಾರ ಎಂದು ಅವರು ನಿರ್ಧರಿಸಿ, ಡೆಲಿವರಿ ಏಜೆಂಟ್ ಬಂದ ಬಳಿಕ, ಮುಖ್ಯ ಬಾಗಿಲನ್ನು ಹೇಗೆ ತೆರೆಯಬೇಕು ಎಂಬುದನ್ನು ಹೇಳಿ ನಂತರ ಬಾಗಿಲು ತೆರೆದು ಅವರ ಸಹಾಯದಿಂದ ಮನೆ ಒಳಗೆ ಬಂದಿದ್ದಾರೆ.
ಈ ಘಟನೆಯನ್ನು ಪುಣೆಯ ನಿವಾಸಿ ಮಿಹಿರ್ ಗಹುಕರ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಇದು ಭಾರೀ ವೈರಲ್ ಆಗುತ್ತಿದೆ.

