ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂಲಕ ಮನೆಮಾತಾಗಿರುವ ಗಿಲ್ಲಿ ನಟ, ಸದ್ಯ ವಿವಾದವೊಂದರ ಸುಳಿಯಲ್ಲಿ ಸಿಲುಕಿದ್ದಾರೆ. ‘ಸರ್ಕಾರಿ ಶಾಲೆ H8’ ಚಿತ್ರದ ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಸಿನಿಮಾ ತಂಡ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಈ ಗಂಭೀರ ಆರೋಪದ ಬೆನ್ನಲ್ಲೇ, ಮತ್ತೊಂದು ಸಿನಿಮಾದ ವೇದಿಕೆಯಲ್ಲಿ ಅವರಿಗೆ ಹಿರಿಯರೊಬ್ಬರಿಂದ ನೇರವಾದ ಸಲಹೆ ಲಭಿಸಿದೆ.
ಗೌರವ್ ಶೆಟ್ಟಿ ಅಭಿನಯದ ‘ಸೂಪರ್ ಹಿಟ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಬಹಿರಂಗವಾಗಿಯೇ ಗಿಲ್ಲಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು. “ನಿನಗೆ ಮೊದಲು ಚಾನ್ಸ್ ಕೊಟ್ಟವರನ್ನು ಎಂದಿಗೂ ಮರೆಯಬೇಡ” ಎಂದು ಹೇಳುವ ಮೂಲಕ, ಉದ್ಯಮದಲ್ಲಿ ಕೃತಜ್ಞತೆ ಎಷ್ಟು ಮುಖ್ಯ ಎಂಬುದನ್ನು ನೆನಪಿಸಿದರು.
ತಮ್ಮ ಮೇಲಿರುವ ಆರೋಪಗಳ ಬಗ್ಗೆ ಅಂತಿಮವಾಗಿ ಗಿಲ್ಲಿ ಮೌನ ಮುರಿದಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಇತರ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ ಪ್ರಚಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಸಿನಿಮಾ ತಂಡಕ್ಕೆ ಬೇಕಾದ ವಿಡಿಯೋ ಬೈಟ್‌ಗಳನ್ನು ಈಗಾಗಲೇ ನೀಡಿದ್ದೇನೆ. ಅದು ಅವರಿಗೆ ತಲುಪಿದೆಯೋ ಇಲ್ಲವೋ ತಿಳಿದಿಲ್ಲ. ಈಗಾಗಲೇ ಫಿಲ್ಮ್ ಚೇಂಬರ್‌ಗೆ ಹೋಗಿ ನನ್ನ ಕಡೆಯ ವಿವರಣೆಯನ್ನು ನೀಡಿದ್ದೇನೆ.” ಎಂದರು.
ಇದನ್ನೂ ಓದಿ:
ಒಟ್ಟಿನಲ್ಲಿ, ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ಅಹಂಕಾರ ಪ್ರದರ್ಶಿಸುತ್ತಿದ್ದಾರೆ ಎಂಬ ಟೀಕೆಗಳಿಗೆ ಈ ಘಟನೆ ವೇದಿಕೆಯಾಗಿದ್ದು, ನಟ ಮಾತ್ರ ತನ್ನ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.



