ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಆಟವನ್ನು ಇನ್ನಷ್ಟು ರೋಮಾಂಚನಕಾರಿಯಾಗಿ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೊಸ ನಿಯಮವನ್ನು ಪರಿಚಯಿಸಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟ್ಸ್‌ಮನ್‌ಗಳು ಸ್ಟಂಪ್‌ಗಳ ಹಿಂದೆ ಹೋಗಿ ಶಾಟ್ ಬಾರಿಸುವ ಮೂಲಕ, ಹೆಚ್ಚು ರನ್ ಗಳಿಸುವ ತಂತ್ರವನ್ನು ಬಳಸುತ್ತಿದ್ದರು. ಆದ್ರೆ ಇನ್ಮುಂದೆ ಹಾಗಾಗೋದಿಲ್ಲ.
ಹೊಸ ನಿಯಮದ ಪ್ರಕಾರ, ಬ್ಯಾಟ್ಸ್‌ಮನ್ ಸ್ಟಂಪ್‌ಗಳ ಹಿಂದೆ ಹೋಗಿ ಶಾಟ್ ಬಾರಿಸಿದರೆ, ಆತನ ಕೈ, ಕಾಲು ಅಥವಾ ದೇಹದ ಯಾವುದೇ ಭಾಗ ಪಿಚ್ ಮೇಲ್ಮೈ ಮೇಲಿರಬೇಕೆಂದು ತೀರ್ಮಾನಿಸಲಾಗಿದೆ. ದೇಹದ ಯಾವುದೇ ಭಾಗ ಪಿಚ್ ಮೇಲ್ಮೈ ಮೇಲಿಲ್ಲದೆ ಶಾಟ್ ಬಾರಿಸಿದರೆ ಅದನ್ನು ಡೆಡ್ ರನ್ ಆಗಿ ಪರಿಗಣಿಸಲಾಗುವುದು.
ಈ ನಿಯಮವು ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಅನ್ವಯವಾಗುತ್ತದೆ ಮತ್ತು ಬೌಲರ್‌ಗಳಿಗೆ ಸಹಾಯವಾಗಲಿದೆ.