Saturday, January 10, 2026

HEALTH | ಸ್ವೀಟ್‌ ತಿನ್ಲೇಬೇಕು ಅಂದ್ರೆ ಈ ಟೈಮ್‌ನಲ್ಲಿ ಮಾತ್ರ ತಿನ್ನಿ

ಕೆಲವರಿಗೆ ಸಿಹಿ ತಿನ್ನದೇ ಹೋದ್ರೆ ದಿನವೇ ಆರಂಭ ಆಗೋದಿಲ್ಲ. ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಬಿಸ್ಕೆಟ್‌ನಿಂದ ದಿನ ಆರಂಭಿಸ್ತಾರೆ. ಇನ್ನು ಮಧ್ಯ ಮಧ್ಯ ಅದೆಷ್ಟೋ ಸಿಹಿತಿನಿಸುಗಳನ್ನು ಬಾಯಾಡಿಸುತ್ತಾರೆ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ವೀಟ್‌ ತಿನ್ಲೇಬೇಕು ಎನ್ನೋದಾದ್ರೆ ಈ ಸಮಯದಲ್ಲಿ ಮಾತ್ರ ತಿನ್ನಿ..

ಮಧ್ಯಾಹ್ನ ಊಟದ ನಂತರ ಡೆಸರ್ಟ್‌ ಆಗಿ ಸಿಹಿಯನ್ನು ತಿನ್ನಿ, ಅತಿಯಾಗಿ ಅಲ್ಲ ಸ್ವಲ್ಪ ಮಾತ್ರ. ಹೆಲ್ತಿ ಸಿಹಿತಿಂಡಿ ತಿಂದ್ರೆ ಇನ್ನೂ ಬೆಸ್ಟ್‌

ವರ್ಕೌಟ್‌ಗೆ ಹೋಗುವ ಮುನ್ನ ತಿನ್ನಲೇಬೇಕು ಎನಿಸಿದ್ರೆ ಸ್ವಲ್ಪ ತಿನ್ನಿ, ಸಕ್ಕರೆ ಅಂಶ ನಿಮಗೆ ವ್ಯಾಯಾಮ ಮಾಡೋಕೆ ಎನರ್ಜಿ ನೀಡುತ್ತದೆ.

ಯಾವಾಗ ತಿನ್ನಬಾರದು?

ಖಾಲಿ ಹೊಟ್ಟೆಗೆ ಬೆಳ್ಳಂಬೆಳಗ್ಗೆ ಸಿಹಿ ತಿನ್ನುವ ಅಭ್ಯಾಸ ಇದ್ದರೆ ಇಂದೇ ಬಿಟ್ಟುಬಿಡಿ. ಇನ್ನು ರಾತ್ರಿ ಮಲಗುವ ಮುನ್ನ ತಿನ್ನುವ ಅಭ್ಯಾಸ ಇದ್ದರೂ ನಿಲ್ಲಿಸಿ

error: Content is protected !!