ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಕೂದಲು ಆರೈಕೆ ಉತ್ಪನ್ನಗಳು ಲಭ್ಯವಿದ್ದರೂ, ಮನೆಯಲ್ಲೇ ಇದ್ದ ದೇಸಿ ತುಪ್ಪವು ಕೂದಲಿನ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ಇದು ಕೂದಲನ್ನು ಸೊಂಪಾಗಿ, ದಟ್ಟವಾಗಿ, ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
- ತಲೆಹೊಟ್ಟು ಸಮಸ್ಯೆ ನಿವಾರಣೆ: ದೇಸಿ ತುಪ್ಪ ತಲೆಹೊಟ್ಟಿನ ಶಿಲೀಂಧ್ರವನ್ನು ಕಡಿಮೆ ಮಾಡಿ ಕೂದಲನ್ನು ಆರೋಗ್ಯಕರವಾಗಿಸುತ್ತದೆ.
- ಕೂದಲ ಬೆಳವಣಿಗೆ ಉತ್ತೇಜನೆ: ತುಪ್ಪ ವಿಟಮಿನ್ ಎ, ಇ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದು ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.
- ನೈಸರ್ಗಿಕ ಕಂಡಿಷನರ್: ದೇಸಿ ತುಪ್ಪ ಕೂದಲಿಗೆ ಮೃದುತ್ವ ನೀಡುತ್ತದೆ, ತಲೆ ಚರ್ಮವನ್ನು ತಂಪಾಗಿಸುತ್ತಾ ಸತ್ತ ಚರ್ಮಕೋಶಗಳನ್ನು ತೆಗೆದುಹಾಕುತ್ತದೆ.
- ರಕ್ತ ಸಂಚಲನ ಸುಧಾರಣೆ: ತುಪ್ಪದ ಮಸಾಜ್ ನಿಯಮಿತವಾಗಿ ಮಾಡಿದರೆ, ತಲೆ ಚರ್ಮದಲ್ಲಿ ರಕ್ತ ಪರಿಚಲನ ಸುಧಾರಿಸುತ್ತದೆ, ಇದರಿಂದ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ.
- ಬಳಿಕೆಯ ವಿಧಾನ: ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ, ತಲೆ ಮತ್ತು ಬೇರುಗಳಲ್ಲಿ ಮಸಾಜ್ ಮಾಡಿ. ಕನಿಷ್ಠ ಒಂದು ಗಂಟೆ ಅಥವಾ ರಾತ್ರಿ ಪೂರ್ತಿ ಇಟ್ಟು, ನಂತರ ಶಾಂಪೂ ಬಳಸಿ ತೊಳೆಯಬೇಕು.