ದಾಂಪತ್ಯ ಜೀವನವು ಪ್ರೀತಿ, ಗೌರವ ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆಯ ಮೇಲೆ ನಿರ್ಮಿತವಾದ ಅತಿ ಪವಿತ್ರ ಬಾಂಧವ್ಯ. ಪ್ರೀತಿಯಿಂದ ಮದುವೆಯಾದರೂ ಅಥವಾ ಹಿರಿಯರ ಆಶೀರ್ವಾದದಿಂದ ನಡೆದ ಅರೇಂಜ್ ಮ್ಯಾರೇಜ್ ಆದರೂ, ಸಂಸಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬರದೇ ಇರವುದು ಅಸಾಧ್ಯ. ಆದರೆ, ಈ ಸಮಸ್ಯೆಗಳನ್ನು ಹೇಗೆ ಎದುರಿಸುತ್ತೇವೆ ಎನ್ನುವುದು ಜೀವನವನ್ನು ಸುಖಕರಗೊಳಿಸುವ ಕೀಲಿಕೈ. ಈ ಹಿನ್ನೆಲೆಯಲ್ಲಿ ಹೆಂಡತಿಯು ಕೆಲವು ಗುಣಗಳನ್ನು ಪಾಲಿಸಿದರೆ ದಾಂಪತ್ಯವು ನಿಜಕ್ಕೂ ಹಾಲು-ಜೇನಿನಂತಾಗಬಹುದು.
- ಸ್ಪಷ್ಟ ಸಂವಹನ: ಹೆಂಡತಿಯು ತನ್ನ ಭಾವನೆಗಳು, ಅಸಮಾಧಾನಗಳು ಅಥವಾ ನಿರೀಕ್ಷೆಗಳನ್ನು ಮನದಾಳದಿಂದ ಹೇಳಬೇಕು. ಮೌನದಿಂದ ಎಲ್ಲವೂ ಸರಿಯಾಗುತ್ತದೆ ಎಂದು ಭಾವಿಸುವುದು ತಪ್ಪು. ಸ್ಪಷ್ಟವಾಗಿ ಮಾತನಾಡುವುದರಿಂದ ಗಂಡನಿಗೂ ಅರ್ಥವಾಗುತ್ತದೆ ಮತ್ತು ಅಸಮಾಧಾನಗಳು ಕಡಿಮೆಯಾಗುತ್ತವೆ.
- ಗೌರವ: ಪ್ರೀತಿಯಷ್ಟೇ ಗೌರವವೂ ಸಂಬಂಧದಲ್ಲಿ ಅಗತ್ಯ. ಗಂಡನ ಬಗ್ಗೆ ಇತರರ ಮುಂದೆ ಅಸಹನೆ ಅಥವಾ ಟೀಕೆ ವ್ಯಕ್ತಪಡಿಸುವುದು ಸಂಬಂಧ ಹದಗೆಡಿಸುತ್ತದೆ. ಪರಸ್ಪರ ಗೌರವದಿಂದ ಮಾತನಾಡುವುದು ಬಾಂಧವ್ಯವನ್ನು ಬಲಪಡಿಸುತ್ತದೆ.
- ಬದಲಾವಣೆ ಒಪ್ಪಿಕೊಳ್ಳುವುದು: ಮದುವೆಯ ನಂತರ ಅಥವಾ ಮಕ್ಕಳ ನಂತರ ಜೀವನದಲ್ಲಿ ಬದಲಾವಣೆಗಳು ಸಹಜ. ಗಂಡ ಕೆಲಸದಲ್ಲಿ ನಿರತರಾಗಿದ್ದರೂ ಅರ್ಥಮಾಡಿಕೊಳ್ಳಬೇಕು. ಅವನು ನೀಡುವ ಸಮಯವನ್ನು ಸಂತೋಷದಿಂದ ಸ್ವೀಕರಿಸುವುದು ಸಂಬಂಧದಲ್ಲಿ ಶಾಂತಿಯನ್ನು ತರುತ್ತದೆ.
- ಒಟ್ಟಾಗಿ ಕಾರ್ಯನಿರ್ವಹಣೆ: ಮನೆ ಅಥವಾ ಕೆಲಸದ ವಿಚಾರವಾಗಲಿ ಇಬ್ಬರೂ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಸಂಬಂಧ ಆಳವಾಗಿ ಬೆಸೆಯುತ್ತದೆ. ಒಟ್ಟಾಗಿ ಕೆಲಸ ಮಾಡುವುದರಿಂದ ಪರಸ್ಪರ ಅರಿವು ಮತ್ತು ಪ್ರೀತಿ ಹೆಚ್ಚುತ್ತದೆ.
- ಪ್ರೀತಿ ಮತ್ತು ಗೌರವ: ನಿಜವಾದ ಪ್ರೀತಿ ಅಂದರೆ ಒಬ್ಬರ ದುರ್ಬಲತೆಗಳನ್ನು ಸಹ ಅರ್ಥಮಾಡಿಕೊಳ್ಳುವುದು. ಹೆಂಡತಿಯ ಪ್ರೀತಿ ಮತ್ತು ಗೌರವದಿಂದ ಗಂಡನಿಗೆ ಮನಸ್ಸಿನ ಶಾಂತಿ ದೊರೆಯುತ್ತದೆ. ಇದು ದಾಂಪತ್ಯ ಜೀವನದ ಬಲವಾದ ಆಧಾರ.