ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕಲ್ಕಂದೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
KA50 M 6232 ನೋಂದಣಿ ಸಂಖ್ಯೆಯ ಆಲ್ಟೋ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಬಜರಂಗದಳ ಹಾಗೂ ಹಿಂಜಾವೇ ಕಾರ್ಯಕರ್ತರು ಕಲ್ಕಂದೂರಿನ ಅದ್ರಾಮ ಮತ್ತು ನಾಲ್ವರು ಅಸ್ಸಾಂ ಕಾರ್ಮಿಕರೂ ಸೇರಿದಂತೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಒಟ್ಟು 5 ಆರೋಪಿಗಳ ಸಮೇತ ಆಲ್ಟೋ ಕಾರನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.

