March 15, 2026
Sunday, March 15, 2026
spot_img

ಬಂಗಾಳದ ಗೂಂಡಾಗಳಿಗೇ ಹೆದರಿಲ್ಲ, ನಿಮ್ಮ ನೋಟಿಸ್‌ಗೆ ಹೆದರುತ್ತೇನೆಯೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮೆಟ್ರೋ ದರ ಏರಿಕೆಯನ್ನು ಖಂಡಿಸಿ ಸಂಸದ ತೇಜಸ್ವಿ ಸೂರ್ಯ ಅವರು ಜಯನಗರ ಶಾಸಕ ರಾಮಮೂರ್ತಿ ಅವರೊಂದಿಗೆ ಸೇರಿ ಇಂದು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ‘ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ’ ಎಂಬ ಬರಹವಿರುವ ಮತ್ತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಭಾವಚಿತ್ರವಿರುವ ಖಾಲಿ ಟ್ರಂಕ್ ಪ್ರದರ್ಶಿಸುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆ ನಡೆಸದಂತೆ ಪೊಲೀಸರು ನೀಡಿದ್ದ ನೋಟಿಸ್‌ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಯ, “ನಾನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಗೂಂಡಾಗಿರಿಗೇ ಹೆದರದೆ ಹೋರಾಟ ಮಾಡಿ ಬಂದವನು. ನಮ್ಮದೇ ಏರಿಯಾದಲ್ಲಿ ಪೊಲೀಸರ ನೋಟಿಸ್ ನೀಡಿ ನನ್ನನ್ನು ಹೆದರಿಸಲು ಸಾಧ್ಯವಿಲ್ಲ,” ಎಂದು ಗುಡುಗಿದರು. ಅಲ್ಲದೆ, ತಾವು ಯಾವುದೇ ಕಾನೂನು ಉಲ್ಲಂಘಿಸುತ್ತಿಲ್ಲ, ಕೇವಲ ಸಾಮಾನ್ಯ ನಾಗರಿಕನಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಮೆಟ್ರೋವನ್ನು ಕೇವಲ ಆದಾಯದ ಮೂಲವಾಗಿ ನೋಡದೆ, ಸರ್ಕಾರವು ಬಜೆಟ್ ಮೂಲಕ ಆರ್ಥಿಕ ನೆರವು ನೀಡಬೇಕು. ವೈಜ್ಞಾನಿಕವಾಗಿ ದರ ನಿಗದಿಪಡಿಸಲು ಹೊಸ ಸಮಿತಿಯನ್ನು ತಕ್ಷಣವೇ ರಚಿಸಬೇಕು.

ಬಿಎಂಆರ್‌ಸಿಎಲ್ ದೇಶದ ಅತಿ ದುಬಾರಿ ಮೆಟ್ರೋ ಆಗುವ ಬದಲು, ಜನಸಾಮಾನ್ಯರಿಗೆ ಎಟುಕುವ ದಕ್ಷ ಮತ್ತು ಸುರಕ್ಷಿತ ಸಾರಿಗೆಯಾಗಬೇಕು.

ಇದನ್ನೂ ಓದಿ:

ಈ ಹೋರಾಟವು ಕೇವಲ ಇಂದಿಗೆ ಸೀಮಿತವಲ್ಲ, ಮೆಟ್ರೋ ಪ್ರಯಾಣಿಕರ ಹಿತದೃಷ್ಟಿಯಿಂದ ಮುಂದೆಯೂ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !