Wednesday, September 3, 2025

ಇಂದಿನಿಂದ ದೆಹಲಿಯಲ್ಲಿ 2 ದಿನ ಕೇಂದ್ರ ಜಿಎಸ್‌ಟಿ ಮಂಡಳಿಯ ಮಹತ್ವದ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯ ಕೇಂದ್ರ ಜಿಎಸ್‌ಟಿ ಮಂಡಳಿಯ ಮಹತ್ವದ ಸಭೆ ಬುಧವಾರದಿಂದ 2 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ.

ಹಾಲಿ 4 ಸ್ತರದಲ್ಲಿರುವ ಜಿಎಸ್ಟಿ ತೆರಿಗೆಯನ್ನು ಶೇ.5 ಮತ್ತು ಶೇ.18ರ 2 ಸ್ತರಕ್ಕೆ ಇಳಿಸಲು ಕೇಂದ್ರ ಸರ್ಕಾರ ಪ್ರಸ್ತಾಪ ಮುಂದಿಟ್ಟಿದೆ. ಈ ಪ್ರಸ್ತಾಪಕ್ಕೆ ಈಗಾಗಲೇ ಜಿಎಸ್ಟಿ ಮಂಡಳಿಯ ಸಚಿವರ ಮಟ್ಟದ ಸಮಿತಿ ಒಪ್ಪಿಗೆ ಸೂಚಿಸಿದ್ದು, ಅದನ್ನು ಬುಧವಾರದ ಸಭೆ ಪರಿಶೀಲಿಸಲಿದೆ.

ಈ ಪೈಕಿ ಯಾವ್ಯಾವ ವಸ್ತುಗಳನ್ನು ಯಾವ ಪಟ್ಟಿಗೆ ತರಬೇಕೆಂಬ ಬಗ್ಗೆ ಬುಧವಾರದ ಸಭೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

ದಿನಬಳಕೆಯ ವಸ್ತುಗಳು, ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ವಿದ್ಯುತ್‌ ಚಾಲಿತ ವಾಹನಗಳನ್ನು ಹಾಲಿ ಇರುವ ಶೇ.28 ಮತ್ತು ಶೇ.18ರ ಸ್ತರದಿಂದ ಶೇ.5ಕ್ಕೆ ಇಳಿಸುವ ಕುರಿತು ಪ್ರಸ್ತಾಪವನ್ನು ಸಚಿವೆ ನಿರ್ಮಲಾ ಅವರು ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಮುಂದೆ ಇಡಲಿದ್ದಾರೆ ಎನ್ನಲಾಗಿದೆ. 2017ರಲ್ಲಿ ದೇಶದಲ್ಲಿ ಜಿಎಸ್ಟಿ ನಿಯಮಗಳು ಜಾರಿ ಬಂದ ಬಳಿಕ ಶೇ.5, ಶೇ.12, ಶೇ.18 ಮತ್ತು ಶೇ.28ರ ತೆರಿಗೆ ಸ್ತರ ಜಾರಿಯಲ್ಲಿದೆ.

ಇದನ್ನೂ ಓದಿ