Saturday, October 11, 2025

ಯುಪಿಐ ಸರ್ವಿಸ್​ನಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಪೇಮೆಂಟ್​ಗೆ ಪಿನ್ ನೀಡಬೇಕಿಲ್ಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ ಯುಪಿಐ ಪೇಮೆಂಟ್ ಸರ್ವಿಸ್​ನಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ. ಟ್ರಾನ್ಸಾಕ್ಷನ್​ನ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಆರ್​ಬಿಐ ಹೊಸ ಮಾರ್ಗಸೂಚಿ ಹೊರಡಿಸಿದೆ. ಅಕ್ಟೋಬರ್ 8ರಿಂದ ಪಿನ್ ನಂಬರ್ ಜೊತೆಗೆ ಬಯೋಮೆಟ್ರಿಕ್ ವೆರಿಫಿಕೇಶನ್ ಆಯ್ಕೆಯೂ ಇರಲಿದೆ.

ಇದೀಗ ಯುಪಿಐ ಮೂಲಕ ಹಣ ಪಾವತಿ ಮಾಡುವಾಗ ಪಿನ್ ನಂಬರ್ ನಮೂದಿಸುವುದು ಕಿರಿಕಿರಿ ಎನಿಸುತ್ತಿದ್ದವರಿಗೆ ನಾಳೆಯಿಂದ ನಿರಾಳರಾಗಬಹುದು.

ಸದ್ಯ ಯುಪಿಐ ಬಳಕೆದಾರರು ಯುಪಿಐ ಲೈಟ್ ಮೂಲಕ ಹಣ ಪಾವತಿಸಿದರೆ ಯಾವುದೇ ಪಿನ್ ನಮೂದಿಸಬೇಕಿಲ್ಲ. ಉಳಿದ ಪೇಮೆಂಟ್​ಗೆ ಪಿನ್ ನಂಬರ್ ಮೂಲಕ ದೃಢೀಕರಣ ಮಾಡುವ ಅವಶ್ಯಕತೆ ಇದೆ. ಇನ್ಮುಂದೆ, ಬಯೋಮೆಟ್ರಿಕ್ ವಿಧಾನಗಳಾದ ಮುಖ ಚಹರೆ ಮತ್ತು ಫಿಂಗರ್ ಪ್ರಿಂಟ್ ಮೂಲಕ ಟ್ರಾನ್ಸಾಕ್ಷನ್ ಅನ್ನು ದೃಢೀಕರಿಸಬಹುದು ಎಂದು ವರದಿಯಾಗಿದೆ.

ಯುಪಿಐನಲ್ಲಿ ಬಯೋಮೆಟ್ರಿಕ್ ಅಥೆಂಟಿಕೇಶನ್​ಗೆ ಆಧಾರ್ ಸಿಸ್ಟಂ ಆಧಾರವಾಗಿರುತ್ತದೆ. ಬಳಕೆದಾರರು ಯುಪಿಐಗೆ ತಮ್ಮ ಆಧಾರ್ ಅನ್ನು ಲಿಂಕ್ ಮಾಡಿರಬೇಕಾಗಬಹುದು. ಬಳಕೆದಾರರ ಮುಖ ಚಹರೆ ಹಾಗೂ ಫಿಂಗರ್ ಪ್ರಿಂಟ್​ಗಳು ಆಧಾರ್ ಫ್ರೇಮ್​ವರ್ಕ್​ನಲ್ಲಿ ಸಂಗ್ರಹವಾಗಿರುತ್ತವೆ.

error: Content is protected !!