Friday, September 12, 2025

ಈ ರಾಜ್ಯದಲ್ಲಿ ಇನ್ಮುಂದೆ ನಾಯಿ ಕಚ್ಚಿದ್ರೂ ಪರಿಹಾರ! ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರಿಯಾಣದಲ್ಲಿ ನಾಯಿ ಕಡಿತದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಸಿಎಂ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರವು ನಾಯಿ ಕಡಿತದ ಪ್ರಕರಣಗಳಲ್ಲಿ ಪರಿಹಾರ ನೀಡಲು ನಿರ್ಧರಿಸಿದೆ. ಸರ್ಕಾರವು ಇದಕ್ಕಾಗಿ ಅಧಿಸೂಚನೆ ಸಹ ಹೊರಡಿಸಿದೆ. ಈಗಾಗಲೇ ಬೀದಿ ನಾಯಿಗಳ ದಾಳಿಗೆ ತುತ್ತಾದ ಜನರು ಪರಿಹಾರವನ್ನು ಪಡೆಯುತ್ತಿದ್ದಾರೆ.

ಹರಿಯಾಣದಲ್ಲಿ ನಿವಾಸಿಗಳಾಗಿದ್ದು, ನಾಯಿ ಕಡಿತಕ್ಕೆ ತುತ್ತಾಗಿದ್ದರೆ ಈಗ ಸರ್ಕಾರವು ನಿಮಗೆ ಪರಿಹಾರವನ್ನು ನೀಡುತ್ತದೆ. ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನುರಾಗ್ ರಸ್ತೋಗಿ ಅವರು ಈ ಕುರಿತು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ನಿಬಂಧನೆಯನ್ನು ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಪರಿವಾರ್ ಸುರಕ್ಷಾ ಯೋಜನೆಗೆ ಸೇರಿಸಲಾಗಿದೆ.

ನಾಯಿ ಕಡಿತದ ಸಂದರ್ಭದಲ್ಲಿ ಗಾಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ನಾಯಿ ಕಚ್ಚಿದಾಗ ಹಲ್ಲಿನ ಗುರು ಮೂಡಿದಲ್ಲಿ ಅದಕ್ಕೆ ಕನಿಷ್ಠ 10 ಸಾವಿರ ರೂಪಾಯಿ ಮತ್ತು ದೇಹದ ಮಾಂಸ 0.2 ಸೆಂಟಿ ಮೀಟರ್​ ಕಿತ್ತುಬಂದಿದ್ದರೆ ಅಂಥ ಗಂಭೀರ ಗಾಯಕ್ಕೆ ಕನಿಷ್ಠ 20 ಸಾವಿರ ನೀಡಲು ಸೂಚಿಸಲಾಗಿದೆ.

ವಯಸ್ಸಿಗನುಗುಣವಾಗಿ ಪರಿಹಾರದ ಮೊತ್ತ

0-12 ವರ್ಷಗಳು – 1 ಲಕ್ಷ ರೂ.

12-18 ವರ್ಷಗಳಿಗೆ – 2 ಲಕ್ಷ ರೂ.

18-25 ವರ್ಷಗಳು – 3 ಲಕ್ಷ ರೂ.

25-45 ವರ್ಷಗಳು – 5 ಲಕ್ಷ ರೂ.

45 ವರ್ಷಕ್ಕಿಂತ ಮೇಲ್ಪಟ್ಟು – 3 ಲಕ್ಷ ರೂ.

ನಾಯಿ ಕಡಿತದ ಸಂತ್ರಸ್ತರು ಪರಿಹಾರ ಪಡೆಯಬೇಕಾದರೆ, ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ನಾಯಿ ಕಡಿತದ ಸಂದರ್ಭದಲ್ಲಿ ಈ ಕೆಳಗಿನ ಷರತ್ತುಗಳು ಪರಿಹಾರಕ್ಕೆ ಅನ್ವಯವಾಗಲಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

ಬೀದಿ/ಸಾಕು ನಾಯಿ ಕಡಿತ ಅಥವಾ ದಾಳಿ ಮಾಡಿರಬೇಕು

ಸಾರ್ವಜನಿಕ ಸ್ಥಳದಲ್ಲಿಯೇ ದಾಳಿ ನಡೆದಿರಬೇಕು.

ಪ್ರಾಣಿಯನ್ನು ದಾಳಿ ಮಾಡಲು ಪ್ರಚೋದಿಸಿರಬಾರದು.

ಬೀದಿ/ಸಾಕು ನಾಯಿಯ ದಾಳಿಯಿಂದ ದೈಹಿಕ ಗಾಯಗಳು ಸಂಭವಿಸಿರಬೇಕು.

ಕುಟುಂಬದ ವಾರ್ಷಿಕ ಆದಾಯ 1 ಲಕ್ಷ 80 ಸಾವಿರ ರೂಪಾಯಿಗಿಂತ ಕಡಿಮೆ ಇರಬೇಕು.

ಇದನ್ನೂ ಓದಿ