ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೊರ ವಲಯ ಸಹಿತ ಹಲವೆಡೆ ಮಹಾರಾಷ್ಟ್ರದಿಂದ ಬಂದ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇಡೀ ರಾಜ್ಯವೇ ಡ್ರಗ್ ಮಾಫಿಯಾ ಸುತ್ತುವರೆದಿದ್ದು, ಸರಕಾರ ಅದನ್ನು ತಡೆಯುವಂತಹ ಪ್ರಯತ್ನ ಮಾಡಿಲ್ಲ. ಇದು ಬೇಜವಾಬ್ದಾರಿಯಾಗಿದೆ. ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲವೇ, ಇಲ್ಲಿನ ಗುಪ್ತಚರ ವಿಭಾಗ ಸತ್ತು ಹೋಗಿದೆಯೇ, ಕಾನೂನು ಸುವ್ಯವಸ್ಥೆ ಇದೆಯೇ ಎಂದು ವಿಧಾನ ಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದರು.
ಅವರು ಸೋಮವಾರ ಉಡುಪಿ ಜಿಲ್ಲೆಯ ಕಾಪು ಬೀಚ್ ಮಂಥನ್ ರೆಸಾರ್ಟ್‌ನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
೬೦೦ ಕೋಟಿ ಡ್ರಗ್ ರಾಜ್ಯಕ್ಕೆ ಬಂದಿದ್ದು, ಸರಕಾರವೇನು ಮಾಡುತ್ತಿದೆ. ಇನ್ನೇನು ಹೊಸ ವರ್ಷ ಆಚರಣೆಗೆ ೨ ದಿನಗಳಷ್ಟೇ ಇದ್ದು, ಎಲ್ಲಾ ಕಡೆ ಬಿಕರಿಯಾಗಲಿದೆ. ಡ್ರಗ್ ಹಂಚಿಕೆಯಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ. ಡ್ರಗ್ ಮಾಫಿಯಾದಿಂದ ಸುತ್ತುವರಿದಿರುವ ರಾಜ್ಯವನ್ನು ಮುಕ್ತಿ ಮಾಡಲು ಕಾಂಗ್ರೆಸ್ ಸರಕಾರಕ್ಕೆ ತಾಕತ್ತು ಇಲ್ಲ. ಬೇರೆ ರಾಜ್ಯದವರೇ ನಮ್ಮ ರಾಜ್ಯವನ್ನು ಆಳುವ ಪರಿಸ್ಥಿತಿ ಬಂದಿದೆ. ಬೆಳಗಾವಿ ಅಧಿವೇಶನದಲ್ಲಿ ರಾಜ್ಯವನ್ನು ವ್ಯಸನ ಮುಕ್ತವಾಗಿಸಲು ನಿಲುವಳಿ ಮಂಡಿಸಿದರೂ ಸರ್ಕಾರ ಉತ್ತರ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದವರು ಬಂದು ರಾಜ್ಯದಲ್ಲಿ ಡ್ರಗ್ ಫ್ಯಾಕ್ಟರಿ ಇದೆ ಎಂದು ದಾಳಿ ನಡೆಸುತ್ತಾರೆ, ಕೋಟ್ಯಾಂತರ ರೂ. ಡ್ರಗ್ ಜಪ್ತಿ ಮಾಡುತ್ತಾರೆ. ನಮ್ಮ ಸಹಕಾರದಿಂದ ಹಿಡಿದರೆಂದು ರಾಜ್ಯ ಸರಕಾರ, ಗೃಹ ಮಂತ್ರಿಗಳು ಹೇಳಿಕೆ ನೀಡುತ್ತಾರೆ. ಇಲ್ಲಿನ ಗುಪ್ತಚರ ವಿಭಾಗ, ಕಾನೂನು ಸುವ್ಯವಸ್ಥೆ ಇದೆಯೇ ಎಂದು ಪ್ರಶ್ನೆ ಮಾಡಿದರು.
ಜೈಲುಗಳು ರೆಸಾರ್ಟ್ ಆಗಿದೆ:
ಮಂಗಳೂರು ಒಂದರಲ್ಲಿಯೇ ೧೩೦ಕ್ಕೂ ಅಽಕ ಡ್ರಗ್ ಪೆಡ್ಲರ್, ಮಾಫಿಯಾಗಳು ಜೈಲ್‌ನಲ್ಲಿದ್ದಾರೆ. ಬೆಂಗಳೂರು ಜೈಲುಗಳು ರೆಸಾರ್ಟ್‌ಗಳಂತಾಗಿವೆ. ಪಂಚತಾರಾ ಸೌಲಭ್ಯಗಳು ಅಲ್ಲಿ ದೊರೆಯುತ್ತಿವೆ. ಜೈಲುಗಳೆಲ್ಲ ವೈನ್ ಫ್ಯಾಕ್ಟರಿಗಳನ್ನಾಗಿ ಮಾಡಿ ಬಿಟ್ಟಿದ್ದಾರೆ. ಜೈಲುಗಳು ಹಣ ವಸೂಲಿ ಮಾಡುವ ಕೇಂದ್ರಗಳಾಗಿವೆ. ಅಲ್ಲಿ ಕೆಲಸ ಮಾಡುವ ಪೊಲೀಸನೊಬ್ಬನಿಗೆ ಪ್ರತಿದಿನ ಒಂದು ಲಕ್ಷ ಆದಾಯ ಗಳಿಸುವ ಸ್ಥಳಗಳಾಗಿ ಬಿಟ್ಟಿವೆ. ವಿಐಪಿ ಕೈದಿಗಳಿರುವ ಪ್ರದೇಶಕ್ಕೆ ಕರ್ತವ್ಯ ಮಾಡಲು ಪೊಲೀಸರಲ್ಲಿಯೇ ಸ್ಪರ್ಧೆ, ವಸೂಲಿ ನಡೆಯುತ್ತಿದೆ. ಗೃಹ ಸಚಿವರು ಏನೇ ಕೇಳಿದರೂ, ವರದಿ ಬಂದಿಲ್ಲ, ಗೊತ್ತಿಲ್ಲವೆಂಬ ಸಾಮಾನ್ಯ ಉತ್ತರವಷ್ಟೇ ಆಗಿ ಬಿಟ್ಟಿದೆ ಎಂದು ಟೀಕಿಸಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ಅವರು ಬೆಂಗಳೂರಿನ ಕಸ ವಿಲೇಗೆ ಯಲಹಂಕದಲ್ಲಿ ಕಾಯ್ದಿಸಿರಿದ ಜಮೀನು ಒತ್ತುವರಿ ತೆರವಿಗೆ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡುತ್ತಾರೆ. ಇದೀಗ ಅಲ್ಲಿನ ನಿಯೋಗ ಬಂದು ಇಲ್ಲಿ ಪರಿಸ್ಥಿತಿ ಸರಿಯಿಲ್ಲ ಎನ್ನುತ್ತಾರೆ. ಕರ್ನಾಟಕದ ನೆಲಜಲದ ಬಗ್ಗೆ ಗೌರವವಿಲ್ಲವೇ. ವಿಜಯಪುರದಲ್ಲಿ ಮಹಾರಾಷ್ಟ್ರದ ಸ್ವಾಮೀಜಿಯೊಬ್ಬರು ಭಾಷಣಕ್ಕೆ ಬರದಂತೆ ಎಲ್ಲಾ ರೀತಿಯ ತಡೆಗಳನ್ನು ಮಾಡುವ ಸರಕಾರಕ್ಕೆ ಇವರನ್ನೇಕೆ ತಡೆಯಲಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ವರದಿ ಕೇಳುತ್ತದೆ ಎಂದರೆ ಕೇರಳ ಸರ್ಕಾರ ಕರ್ನಾಟಕವನ್ನು ಆಡಳಿತ ಮಾಡುತ್ತಿದೆಯೇ, ಇಲ್ಲಿನ ಜಮೀನುಗಳ ಮೇಲೆ ಕೇರಳ ಸರಕಾರದ ಅಽಕಾರ ಇದೆಯಾ ಎಂಬ ಶಂಕೆ ವ್ಯಕ್ತ ಪಡಿಸಿದ್ದು, ರಾಜ್ಯ ಸರ್ಕಾರ ಅವರಿಗೆ ಶರಣಾಗತಿಯಾಗಿದೆ ಎಂದರು.
ಎಲ್ಲಾ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಮಾನ ಮರ್ಯಾದೆ ಹರಾಜು ಮಾಡಿದೆ. ರಾಜ್ಯದ ಜನರ ಮುಂದೆ ಕ್ಷಮಾಪಣೆ ಕೇಳಬೇಕು. ರಾಜ್ಯದ ನೆಲದ ಬಗ್ಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ಬಂಽಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಶೆಟ್ಟಿ , ಶ್ರೀಕಾಂತ ನಾಯಕ್, ಜಿಲ್ಲಾ ಕಾರ್ಯದರ್ಶಿ ಶ್ರೀನಿಽ ಹೆಗ್ಡೆ, ಜಿಲ್ಲಾ ವಕ್ತಾರರಾದ ಕಲ್ಯಾ ದಿವಾಕರ ಶೆಟ್ಟಿ, ಉಪಸ್ಥಿತರಿದ್ದರು.

