April 12, 2026
Sunday, April 12, 2026
spot_img

ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಳ ಎಂದರೆ ಮಧ್ಯಮ ವರ್ಗದ ತುಳಿಯುವ ಅರ್ಥವಲ್ಲ: ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಳ ಎಂದರೆ ದೇಶದಲ್ಲಿ ಮಧ್ಯಮ ವರ್ಗವನ್ನು ತುಳಿಯಲಾಗುತ್ತಿದೆ ಎಂಬರ್ಥವಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

2026-27ನೇ ಸಾಲನಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಮಧ್ಯಮ ವರ್ಗವನ್ನು ತುಳಿಯುತ್ತಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಮಧ್ಯಮ ವರ್ಗ ವಿಸ್ತರಣೆಯ ಪುರಾವೆಗಳಿವೆ ಎಂದು ಹೇಳಿದರು.

ಕಲ್ಯಾಣ ಯೋಜನೆಗಳಲ್ಲಿ ವೆಚ್ಚ ಕಡಿತ ಮಾಡಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾವುದೇ ಯೋಜನೆಗಳಲ್ಲಿ ರಾಜ್ಯಗಳಿಗೆ ಅನುದಾನವನ್ನು ನಿರಾಕರಿಸುವುದಿಲ್ಲ ಅಥವಾ ಸ್ಥಗಿತಗೊಳಿಸುವುದಿಲ್ಲ. ಯುಪಿಎ ಆಡಳಿತದಲ್ಲಿ 94,000 ಕೋಟಿ ರೂ.ಗೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ 14 ಸಾಮಾಜಿಕ ವಲಯದ ಯೋಜನೆಗಳಲ್ಲಿ ಕೇವಲ 37,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿಲ್ಲ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !