March 31, 2026
Tuesday, March 31, 2026
spot_img

IND vs NZ: ಬೂಮ್ ಬೂಮ್ ಬುಮ್ರಾ ಮೇಲಿದೆ ಎಲ್ಲರ ಕಣ್ಣು: ಬೆಂಕಿ ಬೌಲಿಂಗ್ ಮಾಡುತ್ತಾ ಮ್ಯಾಜಿಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಖಾಮುಖಿಗೆ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮಹತ್ವದ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬುಮ್ರಾ ಎಸೆದ ನಿರ್ಣಾಯಕ ಓವರ್ ಪಂದ್ಯವನ್ನು ಸಂಪೂರ್ಣವಾಗಿ ತಿರುಗಿಸಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದಿತ್ತು.

ಇದೀಗ ಕಿವೀಸ್ ವಿರುದ್ಧವೂ ಬುಮ್ರಾ ಅದೇ ರೀತಿಯ ಪರಿಣಾಮಕಾರಿ ಬೌಲಿಂಗ್ ನೀಡುವ ನಿರೀಕ್ಷೆ ತಂಡದಲ್ಲಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ಅವರ ಹಳೆಯ ಅಂಕಿಅಂಶಗಳು ನೋಡಿದರೆ ಸವಾಲು ಸ್ವಲ್ಪ ಕಠಿಣವೆನ್ನಿಸುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಅವರ ಒಟ್ಟಾರೆ ಸರಾಸರಿ ಸುಮಾರು 19.79 ಇದ್ದರೆ, ನ್ಯೂಜಿಲೆಂಡ್ ವಿರುದ್ಧ ಅದು 45.44ಕ್ಕೆ ಏರಿಕೆಯಾಗುತ್ತದೆ. ಏಕದಿನ ಪಂದ್ಯಗಳಲ್ಲಿ 23.55 ಇರುವ ಸರಾಸರಿ ಕಿವೀಸ್ ಎದುರು 39.20 ಆಗಿದೆ.

ಇದನ್ನೂ ಓದಿ:

ಟಿ20 ಕ್ರಿಕೆಟ್‌ನಲ್ಲೂ ಬುಮ್ರಾ ಅವರ ಸರಾಸರಿ ಸಾಮಾನ್ಯವಾಗಿ 18.57 ಇದ್ದರೂ, ನ್ಯೂಜಿಲೆಂಡ್ ವಿರುದ್ಧ ಅದು 23.37 ಆಗಿದೆ. ಇದರಿಂದ ಕಿವೀಸ್ ಬ್ಯಾಟರ್‌ಗಳು ಬುಮ್ರಾ ಬೌಲಿಂಗ್‌ನ್ನು ಎಚ್ಚರಿಕೆಯಿಂದ ಎದುರಿಸುತ್ತಾರೆ ಎನ್ನುವುದು ಸ್ಪಷ್ಟ.

ಆದರೂ ಈ ವಿಶ್ವಕಪ್‌ನಲ್ಲಿ ಬುಮ್ರಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಏಳು ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಕೇವಲ 6.60 ಎಕಾನಮಿ ಉಳಿಸಿಕೊಂಡಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ ಬುಮ್ರಾ ಮತ್ತೊಮ್ಮೆ ಮಿಂಚುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !