ಭಾರತದಲ್ಲಿ ಸ್ವಾತಂತ್ರ್ಯಸಂಭ್ರಮ: ಅಮೆರಿಕದಿಂದ ಬಂತು ವಿಶೇಷ ಶುಭ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದು, ವಿಶ್ವ ನಾಯಕರು ಶುಭಾಶಯದ ಸಂದೇಶ ಕಳುಹಿಸಿದ್ದಾರೆ.

ಇನ್ನುಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಅಮೆರಿಕವು ಸಮಸ್ತ ಭಾರತೀಯರಿಗೆ ಶುಭಾಶಯದ ಸಂದೇಶ ಕಳುಹಿಸಿದೆ. ಅಲ್ಲದೇ ಅಮೆರಿಕ- ಮತ್ತು ಭಾರತದ ಸಂಬಂಧಗಳನ್ನು ‘ಐತಿಹಾಸಿಕ, ಪರಿಣಾಮಕಾರಿ ಮತ್ತು ದೂರಗಾಮಿ’ ಎಂದು ಬಣ್ಣಿಸಿದೆ.

ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿ ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ‘ಪರಸ್ಪರ ಸಮಾನ ದೃಷ್ಟಿಕೋನದ ಪಾಲುದಾರಿಕೆ ಹೊಂದಿರುವ ಭಾರತೀಯರಿಗೆ, ಅಮೆರಿಕದ ಜನತೆಯ ಪರವಾಗಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ತಿಳಿಸಿದ್ದಾರೆ.

‘ಭಾರತವು ತನ್ನ 79ನೇ ಸ್ಕ್ಯಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಅಮೆರಿಕದ ಜನತೆಯ ಪರವಾಗಿ ನಾವು ಭಾರತೀಯರಿಗೆ ಶುಭಾಶಯ ಕೋರುತ್ತೇವೆ. ಭಾರತ ಮತ್ತು ಅಮೆರಿಕ ನಡುವಿನ ಐತಿಹಾಸಿಕ ಸಂಬಂಧಗಳು, ಪರಿಣಾಮಕಾರಿ ಮತ್ತು ದೂರಗಾಮಿ ಉದ್ಧೇಶವನ್ನು ಹೊಂದಿವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಭಾರತದ ಜನರಿಗೆ ಅಮೆರಿಕದ ಪರವಾಗಿ ನಾನು ಅಭಿನಂದನೆಗಳು ಮತ್ತು ಹೃತ್ತೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ ನಡುವಿನ ಐತಿಹಾಸಿಕ ಸಂಬಂಧವು ಪರಿಣಾಮಕಾರಿ ಮತ್ತು ದೂರಗಾಮಿಯಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಎರಡೂ ದೇಶಗಳು ಹೆಚ್ಚು ಶಾಂತಿಯುತ, ಸಮೃದ್ದ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್ ಪ್ರದೇಶದ ಹಂಚಿಕೆಯ ದೃಷ್ಟಿಕೋನದಿಂದ ಒಂದಾಗಿವೆ. ನಮ್ಮ ಪಾಲುದಾರಿಕೆಯು ಕೈಗಾರಿಕೆಗಳನ್ನು ವ್ಯಾಪಿಸಿದೆ, ನಾವೀನ್ಯತೆಯನ್ನು ಉತ್ತೇಜಿಸುತ್ತದೆ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಗಡಿಗಳನ್ನು ತಳ್ಳುತ್ತದೆ ಮತ್ತು ಬಾಹ್ಯಾಕಾಶಕ್ಕೂ ವಿಸ್ತರಿಸುತ್ತದೆ’ ಎಂದು ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!