ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನವರಿ 21 ರಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗುವ ಐದು T20 ಸರಣಿಗೆ ಭಾರತ ಹೊಸ ತಂಡ ಪ್ರಕಟಿಸಿದೆ.
ಫೆಬ್ರವರಿ 7ರಂದು ಆರಂಭವಾಗುವ T20 ವಿಶ್ವಕಪ್ 2026ರ ಮೊದಲು ಇದು ಭಾರತ ತಂಡಕ್ಕೆ ಅಂತಿಮ ಪೂರ್ವಸಿದ್ಧತಾ ಕಾರ್ಯವಾಗಿರುತ್ತದೆ. ಇದಕ್ಕಾಗಿ ತಂಡವನ್ನು ಘೋಷಿಸಲಾಗಿತ್ತು, ಆದರೆ ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಎಂಬ ಇಬ್ಬರು ಪ್ರಮುಖ ಆಟಗಾರರು ಗಾಯಗೊಂಡ ಕಾರಣ ಕೆಲವು ಪ್ರಮುಖ ಬದಲಾವಣೆಗಳನ್ನ ಮಾಡಬೇಕಾಯಿತು.
ಹೀಗಾಗಿ ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಬಿಷ್ಣೋಯ್ ಅವರನ್ನು ಎಲ್ಲಾ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದ್ದರೂ, ಅಯ್ಯರ್ ಅವರನ್ನು ಮೊದಲ ಮೂರು ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ.
ಭಾರತದ ನವೀಕರಿಸಿದ T20 ತಂಡ : ಸೂರ್ಯಕುಮಾರ್ ಯಾದವ್ (C), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (WK), ಶ್ರೇಯಸ್ ಅಯ್ಯರ್ (ಮೊದಲ ಮೂರು T20I), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (VC), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಹರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಇಶಾನ್ ಕಿಶಾನ್(WK), ರವಿ ಬಿಷ್ಣೋಯ್.


