ದ್ವೀಪ ರಾಷ್ಟ್ರದ ಅಭಿವೃದ್ಧಿಗೆ ಭಾರತದಿಂದ 4,850 ಕೋಟಿ ರೂ.ಗಳ ಸಾಲ ನೆರವು ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಲ್ಡೀವ್ಸ್ ದ್ವೀಪ ರಾಷ್ಟ್ರದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು 4,850 ಕೋಟಿ ರೂ. (USD 565 ಮಿಲಿಯನ್) ಮೌಲ್ಯದ ಹೊಸ ಸಾಲವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಜುಲೈ 24ರಂದು ಭಾರತ ಮತ್ತು ಮಾಲ್ಡೀವ್ಸ್ ತಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ರಾಜತಾಂತ್ರಿಕ ಸಂಬಂಧಗಳ 60ನೇ ವರ್ಷವನ್ನು ಆಚರಿಸುತ್ತಿವೆ. ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹದ ಮಹತ್ವವನ್ನು ಪುನರುಚ್ಚರಿಸಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೊಂದಿಗೆ ಪ್ರಧಾನಿ ಮೋದಿ ಎರಡೂ ದೇಶಗಳ ಸಾಂಪ್ರದಾಯಿಕ ದೋಣಿಗಳನ್ನು ಒಳಗೊಂಡ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. ಇದು ಅವರ ಹಂಚಿಕೆಯ ಕಡಲ ಪರಂಪರೆಯನ್ನು ಸಂಕೇತಿಸುತ್ತದೆ. ‘ನಾವು ಕೇವಲ ನೆರೆಹೊರೆಯವರಲ್ಲ, ಸಹ-ಪ್ರಯಾಣಿಕರು ಕೂಡ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ’ ಎಂದು ಮೋದಿ ಹೇಳಿದ್ದಾರೆ.

ಭಾರತ ಮಾಲ್ಡೀವ್ಸ್‌ನ ಹತ್ತಿರದ ನೆರೆಹೊರೆ. ಮಾಲ್ಡೀವ್ಸ್‌ನ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ ಎಂದು ಭಾರತ ಹೆಮ್ಮೆಪಡುತ್ತದೆ. ಅದು ಬಿಕ್ಕಟ್ಟಿನಾಗಿರಲಿ ಅಥವಾ ಸಾಂಕ್ರಾಮಿಕ ರೋಗವಾಗಲಿ ಭಾರತ ಯಾವಾಗಲೂ ಮೊದಲ ಪ್ರತಿಕ್ರಿಯೆ ನೀಡುವವರಾಗಿ ಮಾಲ್ಡೀವ್ಸ್ ಜೊತೆ ನಿಂತಿದೆ. ಅಗತ್ಯ ಸರಕುಗಳನ್ನು ಲಭ್ಯವಾಗುವಂತೆ ಮಾಡುವುದಾಗಲಿ ಅಥವಾ COVID ನಂತರ ಆರ್ಥಿಕತೆಯನ್ನು ನಿರ್ವಹಿಸುವುದಾಗಲಿ ಭಾರತ ಯಾವಾಗಲೂ ಒಟ್ಟಾಗಿ ಕೆಲಸ ಮಾಡಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಾಲ್ಡೀವ್ಸ್‌ಗೆ ಭಾರತ 4,850 ಕೋಟಿ ರೂ. ಸಾಲವನ್ನು ವಿಸ್ತರಿಸಲು ನಿರ್ಧರಿಸಿದೆ ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಪ್ರಾರಂಭವಾಗಿದೆ ಎಂದು ಭಾರತದ ಪ್ರಧಾನಿ ಹೇಳಿದ್ದಾರೆ.

ನಮ್ಮ ಆರ್ಥಿಕ ಪಾಲುದಾರಿಕೆಯನ್ನು ವೇಗಗೊಳಿಸಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಹಂಚಿಕೆಯ ಹೂಡಿಕೆಯನ್ನು ವೇಗಗೊಳಿಸಲು ನಾವು ಶೀಘ್ರದಲ್ಲೇ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಅಂತಿಮಗೊಳಿಸುವತ್ತ ಕೆಲಸ ಮಾಡುತ್ತೇವೆ. ಮುಕ್ತ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗಳು ಸಹ ಪ್ರಾರಂಭವಾಗಿವೆ
ಪ್ರಧಾನಿ ಮೋದಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!