February 5, 2026
Thursday, February 5, 2026
spot_img

ವಿಶ್ವದ ಸಮಸ್ಯೆಗಳಿಗೆ ಸ್ಪಂದಿಸುವ ದೇಶ ಭಾರತ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿ ಭಾಷಣದ ವಂದನಾನ ನಿರ್ಣಯದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ಪ್ರಧಾನಿಗಳು ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳು ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಈ ಗದ್ದಲಗಳ ನಡುವೆಯೇ ಪ್ರಧಾನಿಗಳು, ಭಾರತ ವಿಶ್ವದ ಸಮಸ್ಯೆಗಳಿಗೆ ಸ್ಪಂದಿಸುವ ದೇಶ. ಹಲವು ಅಭಿವೃದ್ಧಿ ಹೊಂದಿದ ದೇಶಗಳ ಜನಸಂಖ್ಯೆ ವೃದ್ಯಾಪ ಹಂತವನ್ನು ತಲುಪಿದ್ದು, ಆದ್ರೆ ಭಾರತ ಯುವ ಜನಸಂಖ್ಯೆಯ ಬಲದಿಂದ ಯಶಸ್ಸಿನತ್ತ ಸಾಗುತ್ತಿದೆ ಎಂದು ಹೇಳಿದರು.

ಭಾರತವು ಕನಸುಗಳ ಸಾಧನೆಯತ್ತ ದೃಢನಿಶ್ಚಯ ಹೊಂದಿರುವ ಪ್ರತಿಭಾನ್ವಿತ ಯುವ ಸಮುದಾಯವನ್ನು ಹೊಂದಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಇಂದು ಭಾರತ ಸಹ ಒಂದಾಗಿದ್ದು, ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ ಸಂಯೋಜನೆಯನ್ನು ನಮ್ಮ ದೇಶ ಹೊಂದಿದೆ. ಇದೆಲ್ಲವೂ ನಮ್ಮ ಆರ್ಥಿಕಶಕ್ತಿಯನ್ನು ತೋರಿಸುತ್ತದೆ ಎಂದರು.

ಎರಡನೇ ಮಹಾಯುದ್ಧದ ನಂತರ ಹೊಸ ಜಾಗತಿಕ ವ್ಯವಸ್ಥೆ ರೂಪುಗೊಂಡಿದ್ದು, ಜಗತ್ತು ಯುದ್ಧದ ಬಿಕ್ಕಟ್ಟುಗಳಲ್ಲಿ ಸಿಲುಕಿ ಹೆಣಗಾಡುತ್ತಿದೆ. ಆದರೆ ಭಾರತ ಹಲವು ದೇಶಗಳಿಗೆ ಆಶಾಕಿರಣವಾಗಿದೆ. ಇಂದು ದೇಶ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.

ಭಾರತ ಸುಧಾರಣೆಯ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಾಗುತ್ತಿದ್ದು, ಕಾಂಗ್ರೆಸ್ ಆಳ್ವಿಕೆಯಲ್ಲಿ ಯಾವುದೇ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿರಲಿಲ್ಲ. ಕಾಂಗ್ರೆಸ್‌ನಿಂದಾಗಿ ದೇಶದ ಆರ್ಥಿಕತೆ ಹಿಂದುಳಿದಿದೆ. ಕಾಂಗ್ರೆಸ್ ಆಳ್ವಿಕೆಯ ತಪ್ಪುಗಳನ್ನು ಸರಿ ಮಾಡಲು ನಮಗೆ ಹೆಚ್ಚು ಸಮಯ ವ್ಯಯವಾಗುತ್ತಿದೆ. ಆರ್ಥಿಕ ನೀತಿಗಳಿಂದಲೇ ದೇಶ ನಡೆಯುತ್ತದೆ. ಅಮೆರಿಕಾದಂತಹ ದೇಶಗಳೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದರು.

ನುಸುಳುಕೋರರ ಪರವಾಗಿ ವಕಾಲತ್ತು ವಹಿಸುವ ಇವರನ್ನು ಯುವಕರು ಹೇಗೆ ಕ್ಷಮಿಸಲು ಸಾಧ್ಯ? ನುಸುಳುಕೋರರು ಅವರ ಸ್ವಾತಂತ್ರ್ಯ, ಜೀವನೋಪಾಯದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಜನರು ಅಂತಹ ಜನರಿಗೆ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟಿಎಂಸಿ ವಿರುದ್ಧ ಪ್ರಧಾನಿಗಳು ವಾಗ್ದಾಳಿ ನಡೆಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !