Monday, October 20, 2025

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನವಕ್ರಾಂತಿಗೆ ಸಜ್ಜಾಗಿದೆ ಭಾರತ: 2028ರ ವೇಳೆಗೆ ಸ್ವದೇಶಿ 7 ನ್ಯಾನೋ ಮೀ. ಕಂಪ್ಯೂಟರ್ ಚಿಪ್ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆತ್ಮನಿರ್ಭರ ಭಾರತ ಯೋಜನೆಯಡಿ ವಿನ್ಯಾಸಗೊಳಿಸಲಾಗಿರುವ 7 ನ್ಯಾನೋ ಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧವಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂದೇಶ ನೀಡಿರುವ ಅಶ್ವಿನಿ ವೈಷ್ಣವ್, ಐಐಟಿ ಮದ್ರಾಸ್ ತಂಡವು ಈ ನ್ಯಾನೋ ಚಿಪ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಮಾಹಿತಿ ತಂತ್ರಜ್ಞಾನ ಸರ್ವರ್ ಗಳಲ್ಲಿ ಇದನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಏಳು ನ್ಯಾನೋ ಮೀಟರ್ ಚಿಪ್ ವಿನ್ಯಾಸ ಹಾಗೂ ಚಿಪ್ ಉತ್ಪಾದನಾ ಘಟಕವು 2028ರ ವೇಳೆಗೆ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಹಣಕಾಸು, ಸಂವಹನ,ರಕ್ಷಣೆ ಮತ್ತು ಕಾರ್ಯತಂತ್ರ ವಲಯಗಳಿಗೆ ಐಐಟಿ ಮದ್ರಾಸ್ ತಂಡವು ಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರಸಕ್ತ ಕಂಪ್ಯೂಟರ್ ಸರ್ವರ್ ಗಳಲ್ಲಿ ಅವುಗಳನ್ನು ಅಳವಡಿಸಿದರೆ ಉಂಟಾಗಬಹುದಾದ ಪರಿಣಾಮಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಸ್ತುತ ಮೊಬೈಲ್, ಕಂಪ್ಯೂಟರ್ ಮತ್ತು ಸರ್ವರ್ ಗಳಂತಹ ಹೈಟೆಕ್ ಸಾಧನಗಳಲ್ಲಿ ಹೆಚ್ಚಾಗಿ 3 ನ್ಯಾನೋ ಮೀಟರ್ ಮತ್ತು 7 ನ್ಯಾನೋ ಮೀಟರ್ ನಡುವಿನ ಗಾತ್ರದ ಚಿಪ್ ಅನ್ನು ಬಳಸಲಾಗುತ್ತಿದೆ.

error: Content is protected !!