Friday, December 19, 2025

ಭಾರತ, ಒಮಾನ್​ ಸಂಬಂಧಕ್ಕೆ ಇದೆ ನಂಬಿಕೆ, ದೀರ್ಘಾಯುಷ್ಯದ ಬಲ: ಪ್ರಧಾನಿ ಮೋದಿ ಬಣ್ಣನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಒಮಾನ್ ನಡುವಿನ ವ್ಯಾಪಾರ ಶೃಂಗಸಭೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಈ ಶೃಂಗಸಭೆಯು ಭಾರತ ಮತ್ತು ಒಮಾನ್​​ ಸಹಭಾಗಿತ್ವಕ್ಕೆ ಹೊಸ ನಿರ್ದೇಶನ ನೀಡಲಿದೆ. ಇಂದು ನಾವು ಐತಿಹಾಸಿಕ ನಿರ್ಧಾರಕ್ಕೆ ಬಂದಿದ್ದು, ಮುಂಬರುವ ಹಲವು ದಶಕಗಳವರೆಗೆ ಈ ತೀರ್ಮಾನದ ಪ್ರತಿಧ್ವನಿ ಇರಲಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಇಂದಿನ ಶೃಂಗಸಭೆಯು ಭಾರತ ಓಮನ್ ಪಾಲುದಾರಿಕೆಗೆ ಹೊಸ ದಿಕ್ಕು, ಹೊಸ ವೇಗವನ್ನು ನೀಡುತ್ತದೆ. ಅದು ಹೊಸ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ. ಇದರಲ್ಲಿ, ನೀವೆಲ್ಲರೂ ದೊಡ್ಡ ಪಾತ್ರವನ್ನು ವಹಿಸುತ್ತೀರಿ ಎಂದು ತಿಳಿಸಿದರು.

ಭಾರತವೂ ಸದಾ ಪ್ರಗತಿ ಮತ್ತು ಸ್ವಾವಲಂಬಿಯಾಗಿದ್ದು, ಭಾರತದ ಬೆಳವಣಿಗೆಯು ಸ್ನೇಹಿತ ದೇಶಗಳ ಬೆಳವಣಿಗೆಗೆ ಕೂಡ ಕಾರಣವಾಗಿದೆ. ಭಾರತವೂ ದೇಶದ ಮೂರನೇ ಆರ್ಥಿಕ ದೇಶವಾಗುವತ್ತ ಸಾಗಿದೆ. ಇದು ಇಡೀ ಜಗತ್ತಿಗೆ ಪ್ರಯೋಜನಕಾರಿಯಾಗಲಿದೆ. ಒಮನ್​ಗೆ ಮತ್ತಷ್ಟು ಸಹಾಯಕವಾಗಲಿದೆ. ನಮ್ಮ ಜನರು ಪರಸ್ಪರರ ಬಗ್ಗೆ ತಿಳಿದಿದ್ದಾರೆ. ವ್ಯಾಪಾರ ಸಂಬಂಧದಲ್ಲಿ ನಾವು ನಂಬಿಕೆಯನ್ನು ಹೊಂದಿದ್ದು, ಪರಸ್ಪರ ಮಾರುಕಟ್ಟೆಗಳನ್ನು ಅರಿತಿದ್ದೇವೆ ಎಂದು ಮೋದಿ ತಿಳಿಸಿದರು.

ಭಾರತ ಒಮಾನ್​ ಸಂಬಂಧವು ನಂಬಿಕೆ ಮತ್ತು ದೀರ್ಘಾಯುಷ್ಯದ ಮೇಲೆ ನಿಂತಿದೆ. ನಮ್ಮ ಸಂಬಂಧವು ನಂಬಿಕೆಯ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ, ಸ್ನೇಹದ ಬಲದ ಮೇಲೆ ಮುಂದುವರಿಯಿತು ಮತ್ತು ಕಾಲಾನಂತರದಲ್ಲಿ ಅದು ಮತ್ತಷ್ಟು ಗಾಢವಾಯಿತು. ಇಂದು, ನಮ್ಮ ರಾಜತಾಂತ್ರಿಕ ಸಂಬಂಧಗಳು 70 ವರ್ಷಗಳಿಂದ ಜಾರಿಯಲ್ಲಿವೆ ಎಂಬುದನ್ನು ಪ್ರಧಾನಿಗಳು ಇದೇ ವೇಳೆ ನೆನಪಿಸಿಕೊಂಡರು.

error: Content is protected !!