Monday, September 22, 2025

ಭಾರತ-ಪಾಕ್ ಪಂದ್ಯ: ಫರ್ಹಾನ್‌ ಗನ್‌ ಸೆಲೆಬ್ರೇಷನ್, ಉಗ್ರರಿಗೆ ಹೋಲಿಸಿದ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಪಂದ್ಯವು ಕೇವಲ ಕ್ರಿಕೆಟ್ ಕೌಶಲ್ಯವನ್ನಷ್ಟೇ ಅಲ್ಲ, ನಿಗದಿತ ಸ್ಲೆಡ್ಜಿಂಗ್ ಹಾಗೂ ವಿವಾದಗಳಿಗೆ ವೇದಿಕೆಯಾಯಿತು. ಭಾರತ ಬ್ಯಾಟಿಂಗ್ ವೇಳೆ ಅಭಿಷೇಕ್ ಶರ್ಮಾ ಮತ್ತು ಪಾಕಿಸ್ತಾನ ಬೌಲರ್ ಹ್ಯಾರಿಸ್ ರೌಫ್ ನಡುವಿನ ವಾಗ್ವಾದ ಸುದ್ದಿಮಾಧ್ಯಮಗಳಲ್ಲಿ ಗಮನ ಸೆಳೆದಿದೆ.

ಇದರ ಜೊತೆಗೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡದ ಶಾಹೀಬ್‌ಜಾದ್ ಫರ್ಹಾನ್ 45 ಎಸೆತಗಳಲ್ಲಿ 58 ರನ್ ಗಳಿಸಿ ಅರ್ಧಶತಕ ಸಾಧಿಸಿದ್ದರು. ಈ ಸಾಧನೆ ನಂತರ ಮಾಡಿದ ಸಂಭ್ರಮಾಚರಣೆ ವಿವಾದಕ್ಕೆ ಕಾರಣವಾಯಿತು. ಫರ್ಹಾನ್ ತಮ್ಮ ಬ್ಯಾಟ್ ಅನ್ನು ಏಕೆ-47 ಗನ್‌ ನಂತೆ ತೋರಿಸಿ ಫೈರಿಂಗ್ ಮಾಡುವಂತೆ ಸಂಭ್ರಮಿಸಿದರು. ಈ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಪಹಲ್ಗಾಮ್ ಉಗ್ರರಿಗೆ ಹೋಲಿಸುತ್ತಿದ್ದಾರೆ.

ಫರ್ಹಾನ್‌ನ ಗನ್ ಸೆಲೆಬ್ರೇಷನ್ ಮೇಲೆ ನೆಟ್ಟಿಗರು ಕಟುಕ ಟೀಕೆ ಮಾಡಿದ್ದು. ಕೆಲವು ಅಭಿಮಾನಿಗಳು ಇದನ್ನು ಅನೌಪಚಾರಿಕ ಹಾಗೂ ಅನಗತ್ಯ ಎಂದು ತೋರುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ