ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾ ಕಪ್ ಕ್ರಿಕೆಟ್ 41 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಫೈನಲ್‌ನಲ್ಲಿ ಮುಖಾಮುಖಿ ಆಗುತ್ತಿದ್ದಾರೆ. ರಾತ್ರಿ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗುವ ಈ ಮಹತ್ವದ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗಾಗಿ ನಿಜವಾದ ಹಬ್ಬವಾಗಲಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡ ಪಾಕಿಸ್ತಾನ್ ತಂಡ ಭಾರತ ಎದುರಿಸೋ ಮುನ್ನ ಸೇಡು ತೀರಿಸಲು ಕಾಯುತ್ತಿದೆ.
ಹಿಂದಿನ ಪಂದ್ಯಗಳ ವೇಳೆ ಹ್ಯಾಂಡ್ ಶೇಕ್ ಇಲ್ಲದೆ ಕಿರಿಕಿರಿ ಮಡಿಕೊಂಡ ಪರಿಣಾಮ ಐಸಿಸಿ ಕೆಲ ಆಟಗಾರರಿಗೆ ದಂಡ ವಿಧಿಸಿತ್ತು. ಇದರ ನಡುವೆ ಮೂರನೇ ಫೈನಲ್ ಪಂದ್ಯದ ತೀವ್ರತೆ ಹೆಚ್ಚಾಗಿದೆ ಮತ್ತು ಮತ್ತೆ ವಿವಾದ ಹುಟ್ಟುವ ಸಾಧ್ಯತೆಗಳೂ ಕೇಳಿಬರುತ್ತಿವೆ.
ಪಾಕಿಸ್ತಾನ್ ತಂಡ ಈ ಫೈನಲ್‌ನಲ್ಲಿ ಜಯ ಸಾಧಿಸಲು ಸದಾ ಒತ್ತಡದಲ್ಲಿಯೇ ಆಡುವ ಅಗತ್ಯವಿದೆ. ಎರಡೂ ತಂಡಗಳ ನಡುವಿನ ಶಕ್ತಿ ಸಮತೋಲನ, ಅಭಿಮಾನಿಗಳ ಭಾವುಕತೆ ಮತ್ತು ಹಿಂದಿನ ಪಂದ್ಯಗಳ ನೆನಪುಗಳೊಂದಿಗೆ, ಫೈನಲ್ ಪಂದ್ಯ ಅತ್ಯಂತ ಸ್ಪರ್ಧಾತ್ಮಕವಾಗಲಿದೆ.