January18, 2026
Sunday, January 18, 2026
spot_img

ವೆಸ್ಟ್ ಇಂಡೀಸ್ ವಿರುದ್ಧ 140 ರನ್ ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಆಟದೊಂದಿಗೆ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಅದ್ಭುತ ಆಟ ತೋರಿದ ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಇನಿಂಗ್ಸ್ ಹಾಗೂ 140 ರನ್‌ಗಳ ಅಂತರದ ಜಯ ಗಳಿಸಿ, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 162 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಬೌಲರ್‌ಗಳು ಬಿಗಿಯಾದ ಬೌಲಿಂಗ್‌ ಮೂಲಕ ಎದುರಾಳಿಯನ್ನು ಒತ್ತಡಕ್ಕೆ ತಳ್ಳಿದರು.

ಭಾರತದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಕೆ.ಎಲ್. ರಾಹುಲ್ (100), ಧ್ರುವ್ ಜುರೆಲ್ (125) ಹಾಗೂ ರವೀಂದ್ರ ಜಡೇಜಾ (104) ಶತಕ ಸಿಡಿಸಿ ತಂಡವನ್ನು ಬಲಪಡಿಸಿದರು. ಇವರ ಶತಕದ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.

ಭಾರೀ ಹಿನ್ನಡೆಯೊಂದಿಗೆ ಮೈದಾನಕ್ಕಿಳಿದ ವೆಸ್ಟ್ ಇಂಡೀಸ್ ತಂಡ ಎರಡನೇ ಇನಿಂಗ್ಸ್‌ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆರಂಭಿಕ ವಿಕೆಟ್‌ಗಳನ್ನು ಬೇಗ ಕಳೆದುಕೊಂಡ ಬಳಿಕ ತಂಡ ಮತ್ತೆ ಗೊಂದಲದಲ್ಲಿ ಉಳಿಯಿತು. ಅಲಿಕ್ ಅಥನಾಝ್ (38) ಹಾಗೂ ಜಸ್ಟಿನ್ ಗ್ರೀವ್ಸ್ (25) ಹೊರತುಪಡಿಸಿ ಉಳಿದವರಿಂದ ಗಮನಾರ್ಹ ಆಟ ಬರಲಿಲ್ಲ. ಕೊನೆಗೆ 146 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಪರ ಮೊಹಮ್ಮದ್ ಸಿರಾಜ್ ಮೊದಲ ಇನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದು ಮಿಂಚಿದರು. ರವೀಂದ್ರ ಜಡೇಜಾ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದರು. ಕುಲ್ದೀಪ್ ಯಾದವ್ ಸಹ 3 ವಿಕೆಟ್ ಪಡೆದು ಎದುರಾಳಿಯನ್ನು ಸಂಪೂರ್ಣವಾಗಿ ಸೋಲಿಸಿದರು.

Must Read

error: Content is protected !!