February 20, 2026
Friday, February 20, 2026
spot_img

ಜಪಾನೀ ಉದ್ದಿಮೆಗಳಿಗೆ ಭಾರತ ಸ್ಪ್ರಿಂಗ್ ಬೋರ್ಡ್: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್ ಮತ್ತು ಭಾರತ ದೇಶಗಳು ಜಂಟಿಯಾಗಿ ಏಷ್ಯನ್ ಪ್ರದೇಶವನ್ನು ಸ್ಥಿರತೆ, ಅಭಿವೃದ್ಧಿ ಮತ್ತು ಸಮೃದ್ಧಿಯತ್ತ ಕೊಂಡೊಯ್ಯಬಲ್ಲವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಪಾನ್ ದೇಶಕ್ಕೆ ಎರಡು ದಿನದ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ,ಭಾರತದ ಮಾರುಕಟ್ಟೆ ನೀಡುವ ಅವಕಾಶಗಳನ್ನು ಜಪಾನೀಯರ ಮುಂದೆ ತೆರೆದಿಟ್ಟಿದ್ದಾರೆ.

ಭಾರತದಲ್ಲಿ ಬಂಡವಾಳ ಕೇವಲ ಹೆಚ್ಚುವುದಷ್ಟೇ ಅಲ್ಲ, ಅದು ದ್ವಿಗುಣಗೊಳ್ಳುತ್ತದೆ. ಕಳೆದ 11 ವರ್ಷದಲ್ಲಿ ಭಾರತದಲ್ಲಿ ಯಾವ ರೀತಿ ಅಭಿವೃದ್ಧಿ ಮತ್ತು ಪರಿವರ್ತನೆ ಆಗಿದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಭಾರತದಲ್ಲಿ ರಾಜಕೀಯ ಸ್ಥಿರತೆ, ಪಾರದರ್ಶಕತೆ ಇದೆ. ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿ ಎನಿಸುತ್ತೇವೆ ಎಂದು ಮೋದಿ ಹೇಳಿದರು.

ಭಾರತದ ಪ್ರತಿಭೆಯೊಂದಿಗೆ ಜಪಾನ್ ದೇಶದ ತಂತ್ರಜ್ಞಾನವು ಸೇರಿದಾಗ ಈ ಶತಮಾನದ ತಂತ್ರಜ್ಞಾನ ಅಭಿವೃದ್ಧಿಗೆ ಪುಷ್ಟಿ ಸಿಗಬಹುದು. ಈ ಸಮಾಗಮವು ಎರಡೂ ದೇಶಗಳಿಗೆ ಪರಸ್ಪರ ಅನುಕೂಲವಾಗಬಲ್ಲುದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಆಟೊಮೊಬೈಲ್ ಸೆಕ್ಟರ್​ನಲ್ಲಿ ನಮ್ಮ ಜೊತೆಗಾರಿಕೆಯು ಒಳ್ಳೆಯ ಯಶಸ್ಸು ಕಂಡಿದೆ. ಬ್ಯಾಟರಿ, ರೋಬೋಟಿಕ್ಸ್, ಸೆಮಿಕಂಡಕ್ಟರ್ ಮತ್ತು ನೂಕ್ಲಿಯಾರ್ ಎನರ್ಜಿಯಲ್ಲೂ ಇದೇ ಮ್ಯಾಜಿಕ್ ನಾವು ಸೃಷ್ಟಿಸಬಹುದು. ಗ್ಲೋಬಲ್ ಸೌತ್ (ತೃತೀಯ ಜಗತ್ತಿನ ದೇಶಗಳು) ಬೆಳವಣಿಗೆಗೆ ಜಂಟಿಯಾಗಿ ಕೊಡುಗೆ ನೀಡಬಹುದು ಎಂದು ತಿಳಿಸಿದ್ದಾರೆ.

ಜಪಾನೀ ಉದ್ದಿಮೆಗಳಿಗೆ ಗ್ಲೋಬಲ್ ಸೌತ್ ಅನ್ನು ಮುಟ್ಟಲು ಭಾರತವೇ ಸ್ಪ್ರಿಂಗ್ ಬೋರ್ಡ್ ಆಗಬಲ್ಲುದು ಎಂದು ಹೇಳಿದ ಅವರು, ಭಾರತದಲ್ಲಿ ನಿರ್ಮಿಸಿ, ವಿಶ್ವಕ್ಕೆ ಸಮರ್ಪಿಸಿ ಎಂದು ಕರೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !