March 22, 2026
Sunday, March 22, 2026
spot_img

ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಇಂಡಿಯಾ ಟೀಮ್ ರೆಡಿ: ಕೌರ್ ಹೆಗಲೇರಿದೆ ಕ್ಯಾಪ್ಟನ್ಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ನಾಯಕಿ ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಗಾಯದಿಂದ ಚೇತರಿಸಿಕೊಂಡಿರುವ ಪ್ರತೀಕಾ ರಾವಲ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಅವರು ಇದೀಗ ಸಂಪೂರ್ಣ ಫಿಟ್ ಆಗಿದ್ದು, ಆರಂಭಿಕ ಜವಾಬ್ದಾರಿಯನ್ನು ಸ್ಮೃತಿ ಮಂಧಾನ ಜೊತೆಗೆ ಹೊರುವ ಸಾಧ್ಯತೆ ಇದೆ. ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಕೂಡ ತಂಡದಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಅವರನ್ನು ಪ್ರಯೋಗಿಸುವ ಯೋಚನೆಗೆ ಅವಕಾಶ ಇದೆ.

ಜೆಮಿಮಾ ರೊಡ್ರಿಗಸ್, ಅಮನ್‌ಜೋತ್ ಕೌರ್ ಮತ್ತು ಹರ್ಲೀನ್ ಡಿಯೋಲ್ ಬ್ಯಾಟಿಂಗ್ ವಿಭಾಗಕ್ಕೆ ಆಳವನ್ನು ನೀಡಿದ್ದಾರೆ. ವಿಕೆಟ್ ಕೀಪರ್‌ಗಳಾಗಿ ರಿಚಾ ಘೋಷ್ ಮತ್ತು ಉಮಾ ಚೆಟ್ರಿ ಆಯ್ಕೆಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್ ಸೇರಿದಂತೆ ಯುವ ಮತ್ತು ಅನುಭವಿ ಆಟಗಾರರ ಸಮತೋಲನ ಕಂಡುಬರುತ್ತದೆ. ಆಲ್‌ರೌಂಡರ್‌ಗಳಾಗಿ ದೀಪ್ತಿ ಶರ್ಮಾ ಹಾಗೂ ಸ್ನೇಹ್ ರಾಣಾ ತಂಡದ ಪ್ರಮುಖ ಆಸ್ತಿಗಳಾಗಿದ್ದಾರೆ.

ಒಟ್ಟಿನಲ್ಲಿ, ಅನುಭವ ಮತ್ತು ಯುವಶಕ್ತಿಯ ಸಂಯೋಜನೆಯೊಂದಿಗೆ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಬಲವಾಗಿ ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !