Saturday, September 13, 2025

ಯಾರಿಗೂ ಬೇಡವಾದ ಭಾರತ vs ಪಾಕ್​ ಪಂದ್ಯದ ಟಿಕೆಟ್​ಗಳು: ಇಲ್ಲಿದೆ ಇದಕ್ಕೆ ಕಾರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಪ್ಟೆಂಬರ್ 14 ರಂದು ದುಬೈ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಯಾವಾಗಲೂ ಭಾರತ-ಪಾಕ್​ ಪಂದ್ಯ ಎಂದರೇ ಸಾಕು ಟೀಕೆಟ್​ಗಳೆಲ್ಲ ಕೇಕ್‌ನಂತೆ ಮಾರಾಟವಾಗುತ್ತವೆ. ಆದರೆ ಈ ಬಾರಿ ಅದು ಆಗುತ್ತಿಲ್ಲ. ಪಹಲ್ಗಾಮ್ ದಾಳಿಯ ನಂತರ, ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಪಂದ್ಯ ಆಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಇದು ಟಿಕೆಟ್ ಮಾರಾಟದಲ್ಲಿ ಕುಸಿತಕ್ಕೆ ಕಾರಣವಾಗಿದೆ. ಹೆಚ್ಚಿನ ಬೆಲೆ ಸಹ ಮತ್ತೊಂದು ಕಾರಣ. ಅದಾಗ್ಯೂ, ಆಯೋಜಕರು ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಿದ್ದಾರೆ. ಆದರೂ ಯಾವುದೇ ಬದಲಾವಣೆಯಾಗಿಲ್ಲ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಭಾರತ-ಪಾಕಿಸ್ತಾನ ಪಂದ್ಯದ ಸಾಮಾನ್ಯ ಟಿಕೆಟ್‌ಗಳ ಬೆಲೆಯನ್ನು 475 ದಿರ್ಹಮ್‌ಗಳಿಂದ (ಸುಮಾರು ರೂ. 11,420) 350 ದಿರ್ಹಮ್‌ಗಳಿಗೆ (ಸುಮಾರು ರೂ. 8415) ಇಳಿಸಿದೆ.

ಅದಾಗ್ಯೂ ಟಿಕೆಟ್‌ಗಳನ್ನು ಮಾರಾಟ ಮಾಡಿ ಸುಮಾರು ಹತ್ತು ದಿನಗಳು ಕಳೆದರೂ, ಶೇಕಡಾ 50 ರಷ್ಟು ಟಿಕೆಟ್‌ಗಳು ಇನ್ನೂ ಮಾರಾಟವಗಿಲ್ಲ ಎಂದು ಐಸಿಸಿ ಹೇಳಿಕೆ ನೀಡಿದೆ. ಪಹಲ್ಗಾಮ್​ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿ ಪಂದ್ಯಾವಳಿಗಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿವೆ ಇದಕ್ಕಾ ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಯಾವುದೇ ಕಾರಣಕ್ಕೂ ಪಂದ್ಯಗಳು ನಡೆಸಬಾರದು ಎಂದು ಹಲವಾರು ಜನರು ಒತ್ತಾಯಿಸುತ್ತಿದ್ದಾರೆ.

ಭಾರತ- ಪಾಕ್ ಪಂದ್ಯಕ್ಕೂ ಅಭಿಮಾನಿಗಳ ಬರ ಉಂಟಾಗಲು ನಾನಾ ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣ ಈ ಪಂದ್ಯಕ್ಕೆ ನಿಗದಿಪಡಿಸಿರುವ ಟಿಕೆಟ್ ಬೆಲೆ. ವರದಿಗಳ ಪ್ರಕಾರ, ವಿಐಪಿ ಸೂಟ್ಸ್​ನ 2 ಟಿಕೆಟ್‌ಗಳನ್ನು ಖರೀದಿಸಲು ಬರೋಬ್ಬರಿ 2.5 ಲಕ್ಷ ರೂ.ಗಳನ್ನು ವ್ಯಯಿಸಬೇಕಿದೆ. ಹಾಗೆಯೇ ರಾಯಲ್ ಬಾಕ್ಸ್ ಟಿಕೆಟ್ ಬೆಲೆ 2.3 ಲಕ್ಷ ರೂ.ಗಳಾಗಿದ್ದು, ಸ್ಕೈ ಬಾಕ್ಸ್ ಟಿಕೆಟ್ ಬೆಲೆ 1.6 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. ಉಳಿದಂತೆ ಪ್ಲಾಟಿನಂ ಟಿಕೆಟ್‌ಗಳ ಬೆಲೆಯೂ ಸಹ 75,659 ರೂ. ಆಗಿದ್ದು, ಇಬ್ಬರಿಗೆ 10,000 ರೂ. ಅತ್ಯಂತ ಕಡಿಮೆ ಬೆಲೆಯ ಟಿಕೆಟ್ ಆಗಿದೆ. ಹೀಗಾಗಿ ಟಿಕೆಟ್​ಗಳ ಬೆಲೆಯೂ ಕೂಡ ಅಭಿಮಾನಿಗಳು ನಿರಾಸಕ್ತಿ ತೋರಿಸಲು ಕಾರಣ ಎನ್ನಲಾಗುತ್ತಿದೆ.

ಸ್ಟಾರ್ ಆಟಗಾರರಲಿಲ್ಲ
ಇದಲ್ಲದೆ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಕರೆತರುವ ಸಾಮರ್ಥ್ಯವಿದ್ದ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಷ್ಯಾಕಪ್​ನಲ್ಲಿ ಆಡದಿರುವುದು. ಇವರಿಬ್ಬರನ್ನು ನೋಡುವುದಕ್ಕಾಗಿಯೇ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಆದರೆ ಇವರಿಬ್ಬರು ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವುದು ಕೂಡ ಟಿಕೆಟ್ ಮಾರಾಟವಾಗದಿರಲು ಕಾರಣವೆನ್ನಬಹುದು. ಇದು ಟೀಂ ಇಂಡಿಯಾ ಕಥೆಯಾದರೆ, ಪಾಕಿಸ್ತಾನ ತಂಡದಲ್ಲೂ ಸ್ಟಾರ್ ಆಟಗಾರರಾದ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಜ್ವಾನ್ ತಂಡದಲ್ಲಿರುವುದು ಅಭಿಮಾನಿಗಳ ಉತ್ಸಾಹವನ್ನು ಕುಂದಿಸಿದೆ ಎನ್ನಬಹುದು.

ಇದನ್ನೂ ಓದಿ