January14, 2026
Wednesday, January 14, 2026
spot_img

India vs Sri Lanka Women’s T20 | ವಿಶಾಖಪಟ್ಟಣದಲ್ಲಿ ಟೀಮ್ ಇಂಡಿಯಾ ದರ್ಬಾರ್: ಶ್ರೀಲಂಕಾ ವಿರುದ್ಧ 8 ವಿಕೆಟ್ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಮಹಿಳಾ ಕ್ರಿಕೆಟ್ ತಂಡ ತನ್ನ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ. ಶ್ರೀಲಂಕಾ ವಿರುದ್ಧ ನಡೆದ ಆರಂಭಿಕ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ, ಯಾವ ಹಂತದಲ್ಲೂ ಒತ್ತಡಕ್ಕೆ ಒಳಗಾಗದೆ ಸುಲಭ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮತೋಲನದ ಆಟ ಪ್ರದರ್ಶಿಸಿದ ಟೀಂ ಇಂಡಿಯಾ, ಸರಣಿಗೆ ಭರ್ಜರಿ ಆರಂಭ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ, ಭಾರತದ ಶಿಸ್ತಿನ ಬೌಲಿಂಗ್ ಎದುರು ರನ್ ಗಳಿಸಲು ಕಷ್ಟಪಟ್ಟಿತು. ಆರಂಭದಲ್ಲೇ ನಾಯಕಿ ಚಾಮರಿ ಅಟಪಟ್ಟು ವಿಕೆಟ್ ಕಳೆದುಕೊಂಡು ತಂಡ ಹಿನ್ನಡೆ ಅನುಭವಿಸಿತು. ವಿಷ್ಮಿ ಗುಣರತ್ನೆ ಮಾತ್ರ ತಾಳ್ಮೆಯ ಆಟವಾಡಿ ತಂಡಕ್ಕೆ ಗೌರವದ ಮೊತ್ತ ತಲುಪಿಸಿದರು. ಆದರೆ ನಿರಂತರ ವಿಕೆಟ್ ಪತನದಿಂದ ಶ್ರೀಲಂಕಾ 20 ಓವರ್‌ಗಳಲ್ಲಿ 120 ರನ್‌ಗಳಿಗೆ ಸೀಮಿತವಾಯಿತು.

ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲಿ ಒಂದು ವಿಕೆಟ್ ಕಳೆದುಕೊಂಡರೂ, ಜೆಮಿಮಾ ರೊಡ್ರಿಗಸ್ ಅವರ ನಿಶ್ಚಿತ ಹಾಗೂ ದಿಟ್ಟ ಬ್ಯಾಟಿಂಗ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆಗೆ ಕಟ್ಟಿದ ಜೊತೆಯಾಟ ಭಾರತವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿತು. ಜೆಮಿಮಾ ಅಜೇಯ 69 ರನ್‌ ಗಳಿಸಿ ತಂಡದ ಜಯಕ್ಕೆ ಮುನ್ನುಡಿ ಬರೆದರು.

Most Read

error: Content is protected !!