Sunday, October 5, 2025

India vs West Indies : ಮೊಹಮ್ಮದ್ ಸಿರಾಜ್ ಆರ್ಭಟಕ್ಕೆ ವಿಂಡೀಸ್ ಧೂಳೀಪಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾ vs ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೇರಿಬಿಯನ್ ತಂಡವು ಮೊದಲ ಸೆಷನ್‌ನಲ್ಲಿ ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದು, ಭೋಜನ ವಿರಾಮದ ವೇಳೆಗೆ 90 ರನ್‌ಗೆ 5 ವಿಕೆಟ್ ಕಳೆದುಕೊಂಡಿದೆ.

ಮೊದಲ ಆಟಗಾರ ತೇಜ್‌ ನರಾಯಣ್ ಚಂದ್ರಪಾಲ್ ಸಿರಾಜ್‌ ಬೌಲಿಂಗ್‌ನಿಂದ ಶೂನ್ಯಕ್ಕೆ ಔಟ್ ಆಗಿ ವೆಸ್ಟ್ ಇಂಡೀಸ್‌ಗೆ ಮೊದಲ ಹೊಡೆತ ನೀಡಿದರು. ಬಳಿಕ ಜಾನ್ ಕ್ಯಾಂಪ್‌ಬೆಲ್ ಮತ್ತು ಅಲಿಕ್ ಅಥಾಂಜೆ ವಿರುದ್ಧ ಸಿರಾಜ್ ತೀವ್ರ ಬೌಲಿಂಗ್ ನಡೆಸಿ ಕ್ರಮವಾಗಿ ಇನ್ನೂ ಎರಡು ವಿಕೆಟ್ ಗಳನ್ನು ವಶಪಡಿಸಿದರು. ಜಸ್ಪ್ರೀತ್ ಬುಮ್ರಾ ಸಹ ಕ್ಯಾಂಪ್‌ಬೆಲ್ ಅವರನ್ನು 8 ರನ್‌ನಲ್ಲಿ ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು.

ಈ ಪಂದ್ಯದಲ್ಲಿ ಸಿರಾಜ್ 19 ರನ್‌ಗೆ 3 ವಿಕೆಟ್ ಗಳನ್ನು ಪಡೆದು ತಂಡದ ಮೆಚ್ಚುಗೆಗೆ ಪಾತ್ರರಾದರೆ, ಬುಮ್ರಾ 24 ರನ್‌ಗೆ 1 ವಿಕೆಟ್ ಪಡೆದರು. ಕುಲದೀಪ್ ಯಾದವ್ ಕೂಡ 1 ವಿಕೆಟ್ ಪಡೆದಿದ್ದು, ಭಾರತ ಆಟಗಾರರು ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೈನ್ ಅಪ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಕೊಳ್ಳುವತೆ ಕಾಣುತ್ತಿದೆ.

ಭಾರತದ XI: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ವೆಸ್ಟ್ ಇಂಡೀಸ್ XI: ತೇಜ್ ನರಾಯಣ್ ಚಂದ್ರಪಾಲ್, ಜಾನ್ ಕ್ಯಾಂಪ್‌ಬೆಲ್, ಅಲಿಕ್ ಅಥಾಂಜೆ, ಬ್ರಾಂಡನ್ ಕಿಂಗ್, ಶಾಯ್ ಹೋಪ್ (ವಿಕೀ), ರೋಸ್ಟನ್ ಚೇಸ್, ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಜೋಹಾನ್ ಲೈನ್, ಜೇಡನ್ ಸೀಲ್ಸ್.