Sunday, October 12, 2025

ಔರಂಗಜೇಬ್ ಆಡಳಿತದಲ್ಲಿ ಮಾತ್ರ ಭಾರತ ಅಖಂಡವಾಗಿತ್ತು: ಪಾಕ್ ಸಚಿವನ ಮತ್ತೊಂದು ವಿವಾದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ಹೊರತುಪಡಿಸಿ ಭಾರತ ನಿಜವಾಗಿಯೂ ಎಂದಿಗೂ ಒಗ್ಗಟ್ಟಾಗಿರಲಿಲ್ಲ ಅಥವಾ ಅಖಂಡವಾಗಿರಲಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತೊಂದು ಆಧಾರರಹಿತ ಹೇಳಿಕೆಯನ್ನು ನೀಡಿದ್ದಾರೆ.

ಭಾರತದ ಇತಿಹಾಸದ ಪ್ರಕಾರ, ಔರಂಗಜೇಬ್ ಆಡಳಿತದಲ್ಲಿ ಭಾರತ ಒಗ್ಗಟ್ಟಾಗಿತ್ತು. ಆದರೆ ಪಾಕಿಸ್ತಾನ ಹಾಗಲ್ಲ, ಕಾರಣ ಪಾಕಿಸ್ತಾನ ಅಲ್ಲಾಹು ಸೃಷ್ಟಿಸಿದ ದೇಶ. ಮನೆಯಲ್ಲಿ, ನಾವು ವಾಗ್ವಾದ, ಚರ್ಚೆ, ಆರೋಪ, ಪ್ರತ್ಯಾರೋಪ ಮಾಡುತ್ತೇವೆ. ಆದರೆ ಭಾರತ ವಿಚಾರ ಬಂದಾಗ ನಾವು ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ.

ಭಾರತ ವಿರುದ್ಧ ಯುದ್ದ ನಡೆಯುತ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಖವಾಜಾ ಆಸೀಫ್, ಭಾರತದ ವಿರುದ್ಧ ವಾರ್ ಈಸ್ ರಿಯಲ್ ಎಂದಿದ್ದಾರೆ. ಭಾರತ ವಿರುದ್ದ ಯುದ್ಧ ನಿಜ, ಭಾರತದ ವಿರುದ್ಧ ಸವಾಲು ಇರುವುದು ನಿಜ. ಈಗ ಯುದ್ದ ನಡೆದರೆ ಅಲ್ಲಾಹು ಇಚ್ಚೆಯಂತೆ ನಾವು ಉತ್ತಮ ಫಲಿತಾಂಶ ಪಡೆಯುತ್ತೇವೆ ಎಂದು ಹೇಳಿದ್ದಾರೆ.

error: Content is protected !!