ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಕಚ್ಚಾ ತೈಲ ವ್ಯಾಪಾರವನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಲು ಅಮೆರಿಕ ಪ್ರಯತ್ನಿಸುತ್ತಿರುವುದನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಖಂಡಿಸಿದ್ದಾರೆ.
ಭಾರತ ಎಂದಿಗೂ ಅಂತಹ ಬೇಡಿಕೆಗಳಿಗೆ ಮಣಿಯುವುದಿಲ್ಲ. ಯಾರ ಮುಂದೆಯೂ ಅವಮಾನಕ್ಕೊಳಗಾಗಲು ರಷ್ಯಾ ಬಿಡುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ಭಾರತವು ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು ಆರ್ಥಿಕ ಲೆಕ್ಕಾಚಾರ ಅಷ್ಟೆ. ಇಲ್ಲಿ ಯಾವುದೇ ರಾಜಕೀಯ ಅಂಶವಿಲ್ಲ. ಭಾರತ ನಮ್ಮ ಇಂಧನ ಪೂರೈಕೆಗಳನ್ನು ನಿರಾಕರಿಸಿದರೆ, ಅದು ಕೆಲವು ನಷ್ಟಗಳನ್ನು ಅನುಭವಿಸುತ್ತದೆ. ಅಂದಾಜುಗಳು ಬದಲಾಗುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.