ಹೊಸ ದಿಗಂತ ಡಿಜಿಟಲ್ ಡೆಸ್ಕ್: :
ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಭಾರತ ಅಮೆರಿಕ ವಿರುದ್ಧ ಬ್ಯಾಟಿಂಗ್ ನಲ್ಲಿ ಪರದಾಡಿದ್ದು 162 ರನ್ ಗಳ ಸಾಧಾರಣ ಗುರಿ ನೀಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆಟಗಾರರು ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಪರದಾಡಿದರು.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಡಕೌಟ್ ಆದರೆ, ಇಶಾನ್ ಕಿಶನ್ 20 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ ರನ್ ಗಳಿಕೆ 25ರನ್ ಗೇ ಸೀಮಿತವಾಯಿತು. ಶಿವಂ ದುಬೆ ಮೊದಲ ಎಸೆತದಲ್ಲೇ ಶೂನ್ಯ ಸುತ್ತಿ ನಿರ್ಗಮಿಸಿದರು. ರಿಂಕು ಸಿಂಗ್ 14 ಎಸೆತದಲ್ಲಿ 6 ರನ್ ಗಳಿಸಿ ಮೊಹ್ಸಿನ್ ಬೌಲಿಂಗ್ ನಲ್ಲಿ ಔಟಾದರು. ಹಾರ್ದಿಕ್ ಪಾಂಡ್ಯಾ ಕೂಡ 5 ರನ್ ಗಳಿಸಿ ಹರ್ಮೀತ್ ಸಿಂಗ್ ಬೌಲಿಂಗ್ ನಲ್ಲಿ ಔಟಾಗಿ ನಿರಾಶೆ ಮೂಡಿಸಿದರು. ಅಕ್ಸರ್ ಪಟೇಲ್ 14 ರನ್ ಗಳಿಸಿದರೆ, ಅರ್ಶ್ ದೀಪ್ ಸಿಂಗ್ 4 ರನ್ ಗಳಿಸಿ ಔಟಾದರು.
ಒಂದೆಡೆ ತಂಡದ ವಿಕೆಟ್ಗಳು ತಉದುರುತ್ತಿದ್ದರೆ, ಇನ್ನೊಂದು ತುದಿಯಲ್ಲಿ ನಾಯಕನ ಜವಾಬ್ದಾರಿ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಸೂರ್ಯ 49 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಸೂರ್ಯ ಅವರ ಈ ಅರ್ಧಶತಕದಿಂದಾಗಿ ಭಾರತ 161 ರನ್ ಕಲೆಹಾಕಿತು.



