ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ತಂಡದ ನೂತನ ಜೆರ್ಸಿ ಪ್ರಾಯೋಜಕರಾಗಿ ಅಪೊಲೊ ಟೈಯರ್ಸ್(Apollo Tyres) ಆಯ್ಕೆಯಾಗಿದೆ. ಈ ಒಪ್ಪಂದವು 2027 ರವರೆಗೆ ಇರಲಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಕಾನೂನು ಹಂತ ಕಾರಣ, ಡ್ರೀಮ್ 11 ಜತೆಗಿನ ಒಪ್ಪಂದವನ್ನು ಬಿಸಿಸಿಐ ಕೊನೆಗೊಳಿಸಿತ್ತು. ಹೀಗಾಗಿ ಬಿಸಿಸಿಐ ನೂತನ ಜೆರ್ಸಿ ಪ್ರಾಯೋಜಕತ್ವಕ್ಕೆ ಅರ್ಜಿ ಆಹ್ವಾನಿಸಿತ್ತು. ಇದೀಗ ಅಪೊಲೊ ಟೈಯರ್ಸ್ ಜತೆಗೆ ಒಪ್ಪಂದ ಅಧಕೃತವಾಗಿದೆ.
ಅಪೊಲೊ ಟೈಯರ್ಸ್ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 4.5 ಕೋಟಿ ರೂ.ಗಳನ್ನು ಪಾವತಿಸಲಿದೆ. ಈ ಹಿಂದೆ ಡ್ರೀಮ್ 11 ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯ ಹಾಗೂ ಐಸಿಸಿ, ಎಸಿಸಿ ಟೂರ್ನಿಗಳ ಪ್ರತಿ ಪಂದ್ಯಕ್ಕೆ ಕ್ರಮವಾಗಿ ₹3.17 ಕೋಟಿ ಹಾಗೂ ₹1.12 ಕೋಟಿ ಪಾವತಿಸುತ್ತಿತ್ತು.