January17, 2026
Saturday, January 17, 2026
spot_img

ಭಾರತದ ಮಹಿಳಾ ತಂಡಕ್ಕೆ ವಿಶ್ವಕಪ್ ಕಿರೀಟ; ಬಹುಮಾನದ ಮಳೆ! ಪಾಕಿಸ್ತಾನದ ಪಾಲು ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇತಿಹಾಸ ಸೃಷ್ಟಿಸಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ 2025ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟ್ರೋಫಿ ಗೆಲ್ಲುವ ಮೂಲಕ ತನ್ನ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಭಾರತಕ್ಕೆ ದಾಖಲೆಯ ₹91 ಕೋಟಿ ಬಹುಮಾನ!

ಐಸಿಸಿಯಿಂದ: ಚಾಂಪಿಯನ್ ಆಗಿ ಹೊರಹೊಮ್ಮಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 40 ಕೋಟಿ ರೂಪಾಯಿಗಳನ್ನು ಘೋಷಿಸಿದೆ.

ಬಿಸಿಸಿಐನಿಂದ: ಮೊಟ್ಟಮೊದಲ ಏಕದಿನ ವಿಶ್ವಕಪ್ ಗೆದ್ದ ಸಾಧನೆಗಾಗಿ ಬಿಸಿಸಿಐ 51 ಕೋಟಿ ರೂಪಾಯಿಗಳ ವಿಶೇಷ ನಗದು ಬಹುಮಾನವನ್ನು ನೀಡುವುದಾಗಿ ಪ್ರಕಟಿಸಿದೆ.

ಭಾರತ ತಂಡಕ್ಕೆ ಒಟ್ಟಾರೆಯಾಗಿ ಬರೋಬ್ಬರಿ 91 ಕೋಟಿ ರೂಪಾಯಿಗಳ ಬಹುಮಾನ ಲಭಿಸಿದೆ.

ಒಂದೂ ಪಂದ್ಯ ಗೆಲ್ಲದ ಪಾಕಿಸ್ತಾನಕ್ಕೆ ಸಿಕ್ಕ ಬಹುಮಾನವೆಷ್ಟು?

ಟೂರ್ನಮೆಂಟ್‌ನ ಅಂತ್ಯದಲ್ಲಿ ಕ್ರೀಡಾಭಿಮಾನಿಗಳಲ್ಲಿ ಒಂದು ಕುತೂಹಲದ ಪ್ರಶ್ನೆ ಮೂಡಿದೆ- ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಪಾಕಿಸ್ತಾನ ಮಹಿಳಾ ತಂಡಕ್ಕೆ ಎಷ್ಟು ಹಣ ಸಿಕ್ಕಿದೆ?

ಶ್ರೀಲಂಕಾದ ಕೊಲಂಬೊದಲ್ಲಿ ತಮ್ಮ ಎಲ್ಲ ಪಂದ್ಯಗಳನ್ನು ಆಡಿದ ಪಾಕಿಸ್ತಾನಿ ಮಹಿಳಾ ತಂಡದ ಪ್ರದರ್ಶನವು ತೀವ್ರ ಕಳಪೆಯಾಗಿತ್ತು. 8 ತಂಡಗಳ ಟೂರ್ನಿಯಲ್ಲಿ ಪಾಕಿಸ್ತಾನವು ಕಡೆಯ ಸ್ಥಾನದಲ್ಲಿತ್ತು. ಗುಂಪು ಹಂತದಲ್ಲಿ ಯಾವುದೇ ಗೆಲುವು ದಾಖಲಾಗದ ಕಾರಣ, ಅವರಿಗೆ ಗೆಲುವಿಗಾಗಿ ನಿಗದಿಪಡಿಸಿದ ಬಹುಮಾನದ ಮೊತ್ತವು ಲಭಿಸಿಲ್ಲ.

ಪಿಸಿಬಿ ಕೂಡ ತಮ್ಮ ತಂಡಕ್ಕೆ ಯಾವುದೇ ಬಹುಮಾನ ನೀಡಿಲ್ಲ. ಆದರೆ, ಐಸಿಸಿ ಟೂರ್ನಮೆಂಟ್‌ನಲ್ಲಿ ಕೇವಲ ಭಾಗವಹಿಸಿದ್ದಕ್ಕಾಗಿ ಮತ್ತು ಕೊನೆಯ ಸ್ಥಾನದಲ್ಲಿದ್ದರೂ ನಿಗದಿತ ಮೊತ್ತವನ್ನು ಪಾಕಿಸ್ತಾನ ಪಡೆದಿದೆ. ಪಾಕಿಸ್ತಾನಕ್ಕೆ ಲಭಿಸಿದ ಮೊತ್ತ ಸುಮಾರು 4.70 ಕೋಟಿ ರೂಪಾಯಿ. ಕಳಪೆ ಪ್ರದರ್ಶನದಿಂದ ಮುಜುಗರಕ್ಕೊಳಗಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡಕ್ಕೆ ಯಾವುದೇ ಹೆಚ್ಚುವರಿ ಬಹುಮಾನ ನೀಡಿಲ್ಲ.

Must Read

error: Content is protected !!