ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯೋಗ ಗುರು ಬಾಬಾ ರಾಮದೇವ್, ಅಮೆರಿಕನ್ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವಂತೆ ಭಾರತೀಯರಿಗೆ ಕರೆ ನೀಡಿದ್ದಾರೆ.
ಭಾರತದ ಜನತೆ ಅಮೆರಿಕದಿಂದ ಬರುತ್ತಿರುವ ಪೆಪ್ಸಿ, ಕೋಕಾ ಕೋಲಾ, ಕೆಎಫ್ಸಿ, ಮೆಕ್ಡೊನಾಲ್ಡ್ಸ್ ಮತ್ತಿತರ ಕಂಪನಿಗಳ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿದಲ್ಲಿ ಅಮೆರಿಕ ದೇಶ ತತ್ತರಿಸುತ್ತದೆ ಎಂದು ರಾಮದೇವ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವಿರುದ್ಧ ಸೆಟೆದು ನಿಂತು ಟ್ರಂಪ್ ಘೋರ ತಪ್ಪು ಮಾಡಿದ್ದಾರೆ. ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್ಸಿ, ಮೆಕ್ಡೊನಾಲ್ಡ್ಸ್ ಅನ್ನು ಯಾರೂ ಖರೀದಿಸಬಾರದು. ವ್ಯಾಪಕವಾಗಿ ಬಾಯ್ಕಾಟ್ ನಡೆಯಬೇಕು. ಇದೇನಾದರೂ ಆದಲ್ಲಿ ಅಮೆರಿಕದಲ್ಲಿ ಗಲಿಬಿಲಿಯಾಗುತ್ತದೆ. ಅಲ್ಲಿ ಹಣದುಬ್ಬರ ಹೆಚ್ಚಳಗೊಂಡು ಟ್ರಂಪ್ ಸರಿದಾರಿಗೆ ಬರುವಂತಾಗುತ್ತದೆ ಎಂದು ಬಾಬಾ ರಾಮದೇವ್ ಹೇಳಿದರು.