April 12, 2026
Sunday, April 12, 2026
spot_img

ಭಾರತದ ರಾಜಧಾನಿ ದೆಹಲಿ ಅಲ್ಲ, ವಾಷಿಂಗ್ಟನ್ ಡಿಸಿ ಆಗಿದೆ: ಸಿಎಂ ಸಿದ್ದರಾಮಯ್ಯ ಟೀಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಭಾರತದ ಕಾರ್ಯನಿರ್ವಹಣಾ ಪ್ರಧಾನಮಂತ್ರಿಗಳಂತೆ ಮಾತನಾಡುತ್ತಿದ್ದು, ಮೋದಿಯವರು ಸೂಚನೆ ಪಾಲಿಸುತ್ತಿರುವ ಬೊಂಬೆಯಂತೆ ಕಾಣಿಸುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಷ್ಯಾ ತೈಲ ಖರೀದಿ ವಿಚಾರದಲ್ಲಿ ಟ್ರಂಪ್ ಅವರ ಹೇಳಿಕೆಗೆ ಕಿಡಿಕಾರಿದ ಅವರು, ರಷ್ಯಾದಿಂದ ತೈಲ ಖರೀದಿಸಲು 30 ದಿನ ಅವಕಾಶ ನೀಡುವುದಾಗಿ ಅಮೆರಿಕಾ ಹೇಳಿಕೆ ನೀಡುತ್ತಿರುವುದು ಭಾರತಕ್ಕೆ ಅವಮಾನಕರ ವಿಚಾರವಾಗಿದೆ ಎಂದು ಟೀಕಿಸಿದ್ದಾರೆ.

ಭಾರತದ ಆರ್ಥಿಕತೆ ಹೇಗೆ ನಡೆಯಬೇಕು ಎಂದು ವಿದೇಶಿ ಸರ್ಕಾರವು ಅನುಮತಿ ನೀಡುವ ಅಥವಾ ತಡೆಯುವ ಸ್ಥಿತಿಯಲ್ಲಿ ಇರಬಾರದು. ಆದರೆ ಭಾರತದ ರಾಜಧಾನಿ ದೆಹಲಿ ಅಲ್ಲ, ವಾಷಿಂಗ್ಟನ್ ಡಿಸಿ ಆಗಿದೆ ಎಂಬ ಭಾವನೆ ಮೂಡುತ್ತಿದೆ ಎಂದು ಟೀಕಿಸಿದ್ದಾರೆ.

ಅಮೆರಿಕ ಇರಾನ್‌ನಿಂದ ತೈಲ ಖರೀದಿಸಬಾರದು ಎಂದು ಹೇಳಿದಾಗ ಭಾರತ ಅದನ್ನು ಪಾಲಿಸಿದೆ. ಈಗ ರಷ್ಯಾದ ತೈಲ ಖರೀದಿಯ ಮೇಲೂ ಒತ್ತಡ ತರಲಾಗುತ್ತಿದೆ. ಈ ಬೆಳವಣಿಗೆಗಳನ್ನು ಗಮಿನಿಸಿದರೆ ಭಾರತದ ಸ್ವಾಯತ್ತತೆ ಪ್ರಶ್ನಾರ್ಥಕವಾಗಿದೆ ಎಂದು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !